×
Ad

ಬೀದರ್ | ಆತ್ಮಹತ್ಯೆ ಪ್ರಕರಣ : ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ರಹೀಮ್ ಖಾನ್

Update: 2025-09-14 18:33 IST

ಬೀದರ್ : ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬಸ್ಥರ ಮನೆಗೆ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು.

ಮೈಲೂರಿನ ನಿವಾಸಿಗಳಾದ ಶಿವಮೂರ್ತಿಯವರ ಇಡೀ ಕುಟುಂಬದ ಆರು ಜನರು ಸಾಲಬಾಧೆಯಿಂದ ಇತ್ತೀಚಿಗೆ ಮರೂರ್ ಗ್ರಾಮದ ಹತ್ತಿರವಿರುವ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಅದರಲ್ಲಿ ಶಿವಮೂರ್ತಿಯ ಹೆಂಡತಿ ಮತ್ತು ಒಬ್ಬ ಬಾಲಕ ಬದುಕುಳಿದು, ಶಿವಮೂರ್ತಿ ಮತ್ತು ಆತನ ಮೂವರು ಮಕ್ಕಳು ಸೇರಿ ನಾಲ್ಕು ಜನ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಂದು ಆತ್ಮಹತ್ಯೆಯಿಂದ ಬದುಕುಳಿದ ಶಿವಮೂರ್ತಿ ಅವರ ಕುಟುಂಬಸ್ಥರಿಗೆ ಸಚಿವ ರಹೀಮ್ ಖಾನ್ ಅವರು ಸಾಂತ್ವನ ಹೇಳಿ, ವೈಯಕ್ತಿಕವಾಗಿ 1 ಲಕ್ಷ ರೂ. ಸಹಾಯ ಮಾಡಿದರು. ಬದುಕುಳಿದ ಮಗುವಿಗೆ ಉಚಿತ ಶಿಕ್ಷಣ ನೀಡುವುದಾಗಿಯೂ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶೌಕತ್ ಅಲಿ, ಶ್ರೀಮಂತ್, ಪ್ರಶಾಂತ್ ಭಾವಿಕಟ್ಟಿ, ಜಾಫರ್ ಭಾಯ್, ದಸರಥ್ ಹಾಗೂ ರಾಜ್‌ಕುಮಾರ್ ಭಾವಿಕಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News