Bidar | ನಗರದ ಸೌಂದರ್ಯದ ಶ್ರೇಯಸ್ಸು ಸ್ವಚ್ಛತಾ ರಾಯಭಾರಿಗಳಿಗೆ ಸಲ್ಲಬೇಕು : ಶಿವರಾಜ್ ರಾಠೋಡ್
'ಸ್ವಚ್ಛತಾ ಹಿ ಸೇವಾ ಏಕ್ ಪೇಡ್ ಮಾ ಕೆ ನಾಮ್’ ಕಾರ್ಯಕ್ರಮ
ಬೀದರ್: ನಗರದ ನೈರ್ಮಲ್ಯ ಮತ್ತು ಸೌಂದರ್ಯದ ಶ್ರೇಯಸ್ಸು ಎಲ್ಲ ಸ್ವಚ್ಛತಾ ರಾಯಭಾರಿಗಳಿಗೆ ಸಲ್ಲಬೇಕು ಎಂದು ಜೋನಲ್ ಕಮಿಷನರ್ ಶಿವರಾಜ್ ರಾಠೋಡ್ ಹೇಳಿದರು.
ನಗರದ ಗುಂಪಾ ಕಾಲೋನಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ ‘ಸ್ವಚ್ಛತಾ ಹಿ ಸೇವಾ’ ಅಭಿಯಾನದ ಭಾಗವಾಗಿ ‘ಏಕ್ ಪೇಡ್ ಮಾ ಕೆ ನಾಮ್’ ಸಸಿ ನೆಡುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರವು ಹಸಿರಿನಿಂದ ಕೂಡಿದ್ದರೆ ಶುದ್ಧ ಗಾಳಿ ದೊರೆಯುವುದರ ಜೊತೆಗೆ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಂಗೊಳಿಸುತ್ತದೆ. ನಗರವನ್ನು ಸ್ವಚ್ಛವಾಗಿಡಲು ಕಮ್ಯುನಿಟಿ ಮೊಬೈಲೈಜರ್‌ಗಳು ಮುಂಜಾನೆಯಿಂದ ರಾತ್ರಿವರೆಗೂ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಮೀನಾಕುಮಾರಿ ಮಾತನಾಡಿ, ಪರಿಸರ ರಕ್ಷಣೆ ಹಾಗೂ ನಗರದ ಶುಚಿತ್ವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಗಿರೀಶ್, ನಾಗೇಶ್ ಸಪಾಟೆ, ಮೀನಾಕುಮಾರಿ, ಕಮ್ಯುನಿಟಿ ಮೊಬೈಲೈಜರ್‌ಗಳಾದ ಬೇಬಿ ರಾಣಿ, ಪೂರ್ಣಿಮಾ, ಸುಧಾ, ಜ್ಯೋತಿ ಮಡಿವಾಳ್, ಪ್ರೀತಿ, ಜೈಶ್ರೀ, ಮುನ್ನಮ್ಮ, ಲಕ್ಷ್ಮಿ, ಆಶಾರಾಣಿ, ಮೀನಾಕ್ಷಿ, ವೈಷ್ಣವಿ ಹಾಗೂ ಚಂದನ ಸೇರಿದಂತೆ ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.