×
Ad

ಬೀದರ್ | ನೀತಿ ನಿರೂಪಣೆಯಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಬಹುಮುಖ್ಯ : ಕಿಶೋರ್ ಕುಮಾರ್ ದುಬೆ

Update: 2025-07-01 21:53 IST

ಬೀದರ್ : ಸರ್ಕಾರದ ನೀತಿ ನಿರೂಪಣೆಯಲ್ಲಿ ಅಂಕಿ ಸಂಖ್ಯೆಗಳ ಪಾತ್ರ ಬಹುಮುಖ್ಯವಾಗಿದ್ದು, ತೆರೆಮೆರೆಯಲ್ಲಿ ಕರ್ತವ್ಯ ನಿರ್ವಹಿಸುವ ಸಾಂಖ್ಯಿಕ ಇಲಾಖೆಯ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಯೋಜನಾಧಿಕಾರಿ ಕಿಶೋರ್ ಕುಮಾರ್ ದುಬೆ ಅವರು ತಿಳಿಸಿದರು.

ಇಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಾಂಖ್ಯಿಕ ತಜ್ಞ ಡಾ.ಪ್ರೊ.ಪಿ.ಸಿ.ಮಹಾಲ್ ನೋಬಿಸ್ ಇವರ ಜನ್ಮ ದಿನಾಚರಣೆ ಕಾರ್ಯಕ್ರಮ ನಿಮಿತ್ಯ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಅವರು ಮಾತನಾಡಿ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಯಶಸ್ಸು ಸಾಂಖ್ಯಿಕ ಇಲಾಖೆಯ ಅಂಕಿ ಅಂಶಗಳ ಮೇಲೆ ಅವಲಂಬಿತವಾಗಿದ್ದು, ಅದನ್ನು ಜಾಗರೂಕತೆಯಿಂದ ನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಉಪನಿರ್ದೆಶಕ (ಸಾಂಖ್ಯಿಕ) ಬಸವರಾಜ್ ಕುಂಬಾರ್, ಜಿಲ್ಲಾ ಖಜಾನಾಧಿಕಾರಿ ರವಿ ಹಕಾರೆ, ಸಾಹಿತಿ ಪಾರ್ವತಿ ಸೋನಾರೆ, ಸಂಖ್ಯೆ ಸಂಗ್ರಹಣಾಧಿಕಾರಿ ಸುವರ್ಣಾ, ಪುಂಡಲೀಕ್ ಕಣಜಿಕರ್, ಶಂಕರ್ ಕನಕ, ಸುಶೀಲಕುಮಾರ್, ಅಶೋಕ್, ಸಂತೋಷ್, ಪಂಡೀತ್ ಶರ್ಮಾ, ರಾಜಕುಮಾರ್, ರತಿಕಾಂತ್ ನೆಳಗೆ, ಜಗದೀಶ್ ಹಾಗೂ ಶಂಕರ್ ಪಾಟೀಲ್, ಸೇರಿದಂತೆ ಕಛೇರಿಯ ವಿವಿಧ ಅಧಿಕಾರಿ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News