×
Ad

ಬೀದರ್ | ಹೆಚ್‌ಐವಿ ಕುರಿತು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು : ಡಾ.ಅನೀಲಕುಮಾರ್ ಚಿಂತಾಮಣಿ

Update: 2025-10-09 20:15 IST

ಬೀದರ್ : ಸಾರ್ವಜನಿಕರಲ್ಲಿ ಮತ್ತು ಯುವಕರಲ್ಲಿ ಹೆಚ್‌ಐವಿ, ಏಡ್ಸ್ ಕುರಿತಂತೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು. ಆಗ ಮಾತ್ರ ಏಡ್ಸ್ ನಿಯಂತ್ರಿಸಲು ಸಾಧ್ಯ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅನೀಲಕುಮಾರ್ ಚಿಂತಾಮಣಿ ಅವರು ತಿಳಿಸಿದರು.

ಗುರುವಾರ ನಗರದ ಬರಿದ್‌ಶಾಹಿ ಉದ್ಯಾನವನದಲ್ಲಿ ಹೆಚ್ಐವಿ, ಏಡ್ಸ್ ಕುರಿತು ಅರಿವು ಮೂಡಿಸಲು ಯುವಜನೋತ್ಸವ ಕಾರ್ಯಕ್ರಮದ ನಿಮಿತ್ಯ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಹಮ್ಮಿಕೊಂಡಿದ್ದ ಮ್ಯಾರಾಥಾನ್‌ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಎಚ್‌ಐವಿ, ಏಡ್ಸ್ ಸೋಂಕು ವ್ಯಾಪಿಸಲು ಆರೋಗ್ಯದ ತಿಳುವಳಿಕೆ ಕೊರತೆ ಮತ್ತು ಅದನ್ನು ಕಡೆಗಣಿಸುತ್ತಿರುವುದೇ ಪ್ರಮುಖ ಕಾರಣವಾಗಿದೆ. ಇದು ಮುಂದಿನ ಪೀಳಿಗೆಗೆ ಹರಡದಂತೆ ಜಾಗೃತರಾಗುವುದು ಅಗತ್ಯವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಸೂರ್ಯಕಾಂತ್ ಅವರು ಮಾತನಾಡಿ, ಹೆಚ್ಐವಿ, ಏಡ್ಸ್ ಮತ್ತು ಎಸ್‌ಟಿಐ ತಡೆಗಟ್ಟಲು ಅರಿವು ಮಾಸಾಚರಣೆಯ ಕುರಿತು ಮಾಹಿತಿ ನೀಡಿದರು.

ಒಟ್ಟು 110 ಜನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದರು. ಈ ಮ್ಯಾರಾಥಾನವು ನಗರದ ಬರಿದ್‌ಶಾಹಿ ಉದ್ಯಾನವನದಿಂದ ಮಡಿವಾಳ ವೃತ್ತ, ಬಿರಾದರ್ ಆಸ್ಪತ್ರೆ, ಸಿದ್ದಾರ್ಥ ಕಾಲೇಜು ಎದುರುಗಡೆಯಿಂದ, ರಾಜೀವಗಾಂಧಿ ವೃತ್ತದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದವರೆಗೆ ನಡೆಯಿತು. ಮ್ಯಾರಾಥಾನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಮೆಡಲ್, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸ್ ಎಎಸ್‌ಐ ವಿಜಯಕುಮಾರ್, ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯ ಐಸಿಟಿಸಿ(ಎ) ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞಾರಾದ ಅರವಿಂದ, ಡ್ಯಾಪ್ಕು, ಐಸಿಟಿಸಿ, ಪಿಪಿಟಿಸಿಟಿ, ಎಆರ್‌ಟಿ, ಎಸ್ ಆರ್ ಎಲ್, ಡಿಎಸ್‌ಆರ್‌ಸಿ, ಶರಣ ತತ್ವ, ಪ್ರವರ್ಧ, ಎಲ್‌ಬಿಇಎಸ್ ಮತ್ತು ಬೆಳದಿಂಗಳು ನೆಟವರ್ಕ್ ಸಿಬ್ಬಂದಿಯವರು ಮತ್ತು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News