×
Ad

ಬೀದರ್ | ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಸಿದ್ಧತೆಗೆ ಮತದಾರರ ಸಲಹಾ ಕೇಂದ್ರ ಸ್ಥಾಪನೆ : ಡಿಸಿ ಶಿಲ್ಪಾ ಶರ್ಮಾ

Update: 2025-10-08 18:28 IST

ಬೀದರ್ : ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿ ನ.11ರ, 2026 ರಂದು ಮುಕ್ತಾಯಗೊಳ್ಳಲಿದ್ದು, 2026ರ ಚುನಾವಣೆಯ ಸಿದ್ಧತೆಗಳು ಪ್ರಾರಂಭವಾಗಿವೆ.

ಈ ಹಿನ್ನೆಲೆಯಲ್ಲಿ, ಮತದಾರರ ನೋಂದಣಿ, ದೂರು ಹಾಗೂ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ಹಾಗೂ ವಿವಿಧ ತಾಲೂಕು ಕಚೇರಿಗಳ ಚುನಾವಣಾ ಶಾಖೆಗಳಲ್ಲಿ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರಗಳು (Voters Helpdesk) ಸ್ಥಾಪಿಸಲಾಗಿದೆ ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08482-226290 ಆಗಿದ್ದು, ಸಾರ್ವಜನಿಕರು ಮತದಾರರ ನೋಂದಣಿ ಹಾಗೂ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಅಥವಾ ದೂರು ದಾಖಲಿಸಲು ಈ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಮತದಾರರ ಪಟ್ಟಿಯನ್ನು ನ.1ರ, 2025ಕ್ಕೆ ಅನ್ವಯಿಸುವಂತೆ ಸಿದ್ಧಪಡಿಸಲಾಗುತ್ತಿದ್ದು, ನ.2ರ5, 2025 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ನ.25ರಿಂದ ಡಿ.10ರವರೆಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ನಂತರ ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಮಟ್ಟದ ಸಲಹಾ ಕೇಂದ್ರಗಳ ಅಧಿಕಾರಿಗಳು ಹಾಗೂ ಸಂಪರ್ಕ ಸಂಖ್ಯೆಗಳು ಹೀಗಿವೆ :

ಬೀದರ್ ಜಿಲ್ಲಾ ಕಚೇರಿ : ಮಲಶೇಟ್ಟಿ ಚಿದ್ರೆ (08482-226290 / 99002 18488), ಪುರಂ ಶಾಂತನು (99163 33950), ಶಿವಕುಮಾರ್ ಬೀದೆ (72596 39007).

ಬೀದರ್ ತಹಸೀಲ್‌ ಕಚೇರಿ : ಪ್ರೇಮದಾಸ್ ಬೋರಾಳೆ (08482-226459 / 97410 89037), ಶಂಕರ್ ಚೌವ್ಹಾಣ್ (08482-226459 / 83173 48038), ಸುನೀಲ್ (83104 04278).

ಔರಾದ್ (ಬಿ) : ವೆಂಕಟೇಶ್ (08485-280024 / 95381 37844), ಪ್ರಭಾಕರ್ (99867 19400).

ಕಮಲನಗರ್ : ಶಿವಾನಂದ್ ನವಾಡೆ (90088 34904), ಶ್ರೀಕಾಂತ್ (73494 75717).

ಬಸವಕಲ್ಯಾಣ : ಅರುಣಕುಮಾರ್ (08481-250338 / 98865 89675), ಅರುಣಕುಮಾರ್ (77953 31327).

ಹುಲಸೂರ : ಸುನೀಲ್ ಸಜ್ಜನಶೇಟ್ಟಿ (99728 94247), ಮಹೇಶ್ ಭೋಸ್ಲೆ (94493 17201).

ಹುಮನಾಬಾದ್ : ಮುನೇಶ್ವರಸ್ವಾಮಿ (08483-270051 / 94485 43450), ವಸಂತ್ (88805 56666).

ಚಿಟಗುಪ್ಪಾ : ಸುಭಾಷಚಂದ್ರ (08482-277577 / 99029 77599), ಕರಬಸಪ್ಪಾ (90191 92284).

ಭಾಲ್ಕಿ : ಗೋಪಾಲ್ ಹಿಪ್ಪರ್ಗಿ (08484-262218 / 99860 95678), ಕಲ್ಲಪ್ಪಾ (70197 30721).

ಈ ಮತದಾರರ ಮಾಹಿತಿ ಮತ್ತು ಸಲಹಾ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಣೆ ಪ್ರಾರಂಭಿಸಿವೆ. ಲಿಖಿತ, ಮೌಖಿಕ ಹಾಗೂ ದೂರವಾಣಿ ಮೂಲಕ ಸ್ವೀಕರಿಸಲಾದ ಎಲ್ಲಾ ದೂರುಗಳು ಮತ್ತು ಸಲಹೆಗಳನ್ನು ದಾಖಲೆ ಮಾಡಲಾಗುವುದು. ನಿಯಮಾನುಸಾರ ಅವುಗಳ ವಿಲೇವಾರಿ ಕೂಡ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News