ಬೀದರ್: ಮಾಂಜ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
Update: 2025-07-05 19:40 IST
ಬೀದರ್: ಜು. 3 ರಂದು ಮಾಂಜ್ರಾ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿಯೊಬ್ಬರ ಮೃತದೇಹ ಇಂದು ಪತ್ತೆಯಾದ ಘಟನೆ ಭಾಲ್ಕಿ ತಾಲ್ಲೂಕಿನ ಭಾಟಸಾಂಗವಿ ಗ್ರಾಮದಲ್ಲಿ ನಡೆದಿದೆ.
ಭಾಟಸಾಂಗವಿ ನಿವಾಸಿ ನಾಮದೇವ್ ಝಳಕೆ (65) ಮೃತಪಟ್ಟವರು.
ನಾಮದೇವ್ ಅವರು ಜು. 3 ರಂದು ತಮ್ಮ ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು. ನಂತರ ಮಾಂಜ್ರಾ ನದಿ ದಾಟಿ ಮೆಹಕರ್ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಸಂಬಂಧಿಕರ ಮನೆಗೆ ಭೇಟಿ ನೀಡಿ ಮರಳಿ ವಾಪಸ್ಸು ಬರುವಾಗ ಮಾಂಜ್ರಾ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಅದೆಷ್ಟೇ ಹುಡುಕಾಡಿದರು ಸಹ ಅವರು ಪತ್ತೆಯಾಗಲಿಲ್ಲ.
ಇಂದು (ಜು. 5) ಬೆಳಿಗ್ಗೆ ಅಗ್ನಿಶಾಮಕ ದಳದವರು ಹುಡುಕಾಟ ಮುಂದುವರೆಸಿದ್ದರು. ಇದರಿಂದಾಗಿ ಮಾಣಿಕೆಶ್ವರ್ ಗ್ರಾಮದ ಹತ್ತಿರ ಇವರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.