×
Ad

ಕೇಂದ್ರ ಸರಕಾರದ ಬಜೆಟ್ ಬಡವರ ಪರವಾಗಿದೆ: ಶ್ರೀಕಾಂತ್ ಸುಂಗಲಕರ್

Update: 2026-02-01 19:53 IST

ಯಾದಗಿರಿ: ಕೇಂದ್ರ ಸರಕಾರ 2026–27ನೇ ಸಾಲಿಗೆ ಮಂಡಿಸಿರುವ 53.5 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಐತಿಹಾಸಿಕವಾಗಿದ್ದು, ಇದು ಬಡವರ ಪರ ಹಾಗೂ ಆರೋಗ್ಯ ಕೇಂದ್ರಿತ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ಶ್ರೀಕಾಂತ್ ಸುಂಗಲಕರ್ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಶ್ರೀಕಾಂತ್ ಸುಂಗಲಕರ್, ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ 17 ಔಷಧಿಗಳ ಬೆಲೆಯನ್ನು ಮತ್ತಷ್ಟು ಇಳಿಕೆ ಮಾಡಿರುವುದು ಸಾಮಾನ್ಯ ಜನರಿಗೆ ದೊಡ್ಡ ವರದಾನವಾಗಿದೆ. ಇದರಿಂದ ದುಬಾರಿ ಚಿಕಿತ್ಸೆಯಿಂದ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.

ಅದೇ ರೀತಿ ಧೂಮಪಾನ, ಮದ್ಯಪಾನ, ಗುಟ್ಕಾ ಸೇರಿದಂತೆ ವ್ಯಸನಕಾರಿ ಉತ್ಪನ್ನಗಳ ದರ ಹೆಚ್ಚಿಸಿರುವುದು ವ್ಯಸನ ಮುಕ್ತ ಭಾರತ ನಿರ್ಮಾಣದತ್ತ ಕೇಂದ್ರ ಸರಕಾರದ ದೃಢ ನಿರ್ಧಾರವನ್ನು ತೋರಿಸುತ್ತದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಆರೋಗ್ಯ, ಬಡವರ ಕಲ್ಯಾಣ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಈ ಬಜೆಟ್ ದಿಕ್ಕು ತೋರಿಸುವಂತಿದೆ ಎಂದು ಶ್ರೀಕಾಂತ್ ಸುಂಗಲಕರ್ ಹೇಳಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News