ಬೀದರ್ | ಎಸ್ಐಆರ್- ಚಿಂತನ ಮಂಥನ ಸಮಾವೇಶದ ಕರಪತ್ರ ಬಿಡುಗಡೆ
ಬೀದರ್ : ಫೆ.3 ರಂದು ನಗರದ ಜಿಲ್ಲಾ ರಂಗ ಮಂದಿರದಲ್ಲಿ ನಡೆಯುವ ಎಸ್ಐಆರ್- ಚಿಂತನ ಮಂಥನ ಸಮಾವೇಶ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಕರಪತ್ರವನ್ನು ಗುರುವಾರ ಅಂಬೇಡ್ಕರ್ ವೃತ್ತದ ಎದುರುಗಡೆ ಸಿದ್ಧರಾಮ ಬೆಲ್ದಾಳ್ ಶರಣರು, ಭಂತೆ ಸಂಘ ರಖ್ಖಿತ್, ಚನ್ನಬಸವಾನಂದ್ ಸ್ವಾಮೀಜಿ, ಸತ್ಯದೇವಿ ಮಾತಾಜಿ, ಪಾಸ್ಟರ್ ಕ್ಲೆರಿ ಡಿಸೊಜಾ, ಪಾಸ್ಟರ್ ವಿಜಯಕುಮಾರ್ ಡೆವಿಡ್, ಮೌಲನಾ ಮುಫ್ತಿ ಸಿರಾಜೋಧ್ದಿನ್ ನಿಜಾಮಿ, ಮೌಲಾನಾ ಮೊನಿಸ್ ಕಿರ್ಮಾನಿ ಜಂಟಿಯಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ಐಆರ್ ವಿರೋಧಿ ಜನಾಂದೋಲನಾ ಸಮಿತಿಯ ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಮಾರುತಿ ಬೌದ್ದೆ, ಮನ್ನಾನ ಸೇಠ್, ಮಹೇಶ್ ಗೋರನಾಳಕರ್, ವಿನಯಕುಮಾರ್ ಮಾಳಗೆ, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದರ್, ಡಾ.ಮಕ್ಸೂದ್ ಚಂದಾ, ತಲಹಾ ಹಾಸ್ಮಿ, ಮುಹಮ್ಮದ್ ನಿಜಾಮೋದ್ದಿನ್, ವಿಜಯಕುಮಾರ ಆರ್., ಮಂಜುಳಾ ಮೆತೆಸುಲಾ, ನಳಿನಕುಮಾರ್ ಶಾಮಸನ್, ಡಾ. ದೇವಿದಾಸ್ ತುಮಕುಂಟೆ, ಡಾ.ಕಾಶಿನಾಥ್ ಚೆಲ್ವಾ, ವಿಠಲದಾಸ್ ಪ್ಯಾಗೆ, ಸಂಜಯ್ ಜಾಗಿರದಾರ್, ಮುಹಮ್ಮದ್ ಆಸಿಫ್, ಉಷಾಬಾಯಿ ಬನ್ಸುಡೆ, ಮುಹಮ್ಮದ್ ಆರಿಫೋದ್ದಿನ್, ಸಂದೀಪ್ ಮುಕಿಂದೆ, ಮುಕೆಶ್ ರಾಯ್, ವಿನೋದ್ ಗುಪ್ತಾ, ಸಂದೀಪ್ ಕಾಂಟೆ, ಪ್ರದೀಪ್ ನಾಟೆಕರ್, ಅಮರ್ ಅಲ್ಲಾಪೂರ್, ನಂದಮ್ಮಾ ಕುಂದೆ, ಸೋನಮ್ಮ ಕಸ್ತೂರೆ, ಕಮಳಮ್ಮಾ ಸಂತಪೂರೆ, ಶೆಶಿಕಲಾ ಶರ್ಮಾ, ಸಂಗೀತಾ ಕಾಂಬಳೆ, ಮನೊರಂಜನಿ ಮೊಹನ್ ಹಾಗೂ ಸುಮನ್ ಶಿಂದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.