ಮದುವೆಯಾಗುವುದಾಗಿ ನಂಬಿಸಿ ಮೋಸ ಆರೋಪ; ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ಪುತ್ರನ ವಿರುದ್ಧ ದೂರು
ಬೀದರ್ : ಮದುವೆಯಾಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಹಲವು ಸಲ ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಗೆ ಒಪ್ಪುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕ ಪ್ರಭು ಚೌವ್ಹಾಣ ಅವರ ಮಗ ಪ್ರತಿಕ್ ವಿರುದ್ಧ ಸಂತ್ರಸ್ತೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಇದೇ ವಿಚಾರವಾಗಿ ಕೆಲ ದಿನಗಳ ಹಿಂದೆ ಪ್ರಭು ಚೌವ್ಹಾಣ್ ಮತ್ತು ಸಂತ್ರಸ್ತೆಯ ಕುಟುಂಬದವರ ನಡುವೆ ಮಾರಾಮಾರಿ ನಡೆದಿದ್ದು, ಅವರು ಹೊಡೆದಾಡಿಕೊಂಡ ವಿಡಿಯೋ ಕೂಡ ವೈರಲ್ ಆಗಿತ್ತು. ಇದೀಗ ಸಂತ್ರಸ್ತೆಯು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿಶ್ಚಿತಾರ್ಥವಾಗಿ ಎರಡು ವರ್ಷ ಆಯ್ತು. ಮದುವೆ ಮಾಡೋಣ ಎಂದರೆ ಇಂದು ನಾಳೆ ಎನ್ನುತ್ತಾ ದಿನ ಮುಂದುಡುತ್ತಾ ಬಂದಿದ್ದಾರೆ. ಮದುವೆ ಮಾತುಕತೆಗಾಗಿ ಅವರ ಮನೆಗೆ ಹೋದಾಗ ಮದುವೆಗಾಗಿ ನಿರಾಕರಣೆ ಮಾಡಿದ್ದಾರೆ. ಮದುವೆ ಬೇಡ ಎನ್ನುವುದಕ್ಕೆ ಕಾರಣ ಹೇಳುತ್ತಿಲ್ಲ. ಇದರಿಂದಾಗಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಸಂತ್ರಸ್ತೆಯು ಮಾಧ್ಯಮದ ಮುಂದೆ ತಮ್ಮ ಅಲಳನ್ನು ತೊಡಿಕೊಂಡಿದ್ದಾರೆ.