ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡಲಾಗುವುದು : ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್
ಬೀದರ್ : ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಗೆ ಸಹಕಾರ ನೀಡಲಾಗುವುದು ಎಂದು ಶಾಸಕ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್ ಅವರು ಹೇಳಿದ್ದಾರೆ.
ಇಂದು ಹುಮನಾಬಾದ್‌ನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರಿನ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಅವರ ಸಹಯೋಗದಲ್ಲಿ ಹುಮನಾಬಾದ್ ನಲ್ಲಿ ಹಮ್ಮಿಕೊಂಡಿದ್ದ ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರಂಜಾ ಮಹಿಳಾ ರೈತ ಉತ್ಪಾದಕರ ಕಂಪನಿಯೂ ಎಫ್‌ಪಿಓ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಕಂಪನಿ ಇನ್ನು ಯಶಸ್ವಿಯಾಗಲಿ ಎಂದು ಹಾರೈಸಿದ ಅವರು, ಸರ್ಕಾರದ ವತಿಯಿಂದ ಅಥವಾ ತಮ್ಮ ಕಡೆಯಿಂದ ಸಹಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರಂಜಾ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯವರಾದ ಮಧುಮತಿ, ಅನಿಲ್, ಜಿಲ್ಲಾ ಪಂಚಾಯತ್ ಡಿ.ಆರ್.ಡಿ.ಎ ಯೋಜನಾ ನಿರ್ದೇಶಕ ಜಗನ್ನಾಥ ಮೂರ್ತಿ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ತಹಶೀಲ್ದಾರ್ ತಬಸಮ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ದಯಾನಂದ.ಎಸ್ ಹಾಗೂ ಎಂ.ಕೆ.ಪಿ.ಸಿ. ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಸೇರಿದಂತೆ ಕಂಪನಿಯ ಷೇರುದಾರರು ಮತ್ತು ಗ್ರಾಮ ಪಂಚಾಯತ್ ಮಟ್ಟದ ಎನ್.ಆರ್.ಎಲ್.ಎಂ. ಸಿಬ್ಬಂದಿ ಉಪಸ್ಥಿತರಿದ್ದರು.