ಜಿಲ್ಲಾದ್ಯಂತ ನಶಾ ಮುಕ್ತ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ : ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್: ಜಿಲ್ಲಾದ್ಯಂತ ನಶಾ ಮುಕ್ತ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಶಾ ಮುಕ್ತ ಭಾರತ ಅಭಿಯಾನ ಆರಂಭವಾಗಿ 5ನೇ ವರ್ಷ ಮುಗಿದಿರುವ ಹಿನ್ನೆಲೆಯಲ್ಲಿ ಆ.13 ರಿಂದ 31ರ ವರೆಗೆ ಮಾದಕ ವಸ್ತು ಸೇವನೆಯ ದುಷ್ಪರಿಣಾಮ ಕುರಿತು ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಕಾಲೇಜು ಮತ್ತು ಅಂತರ್ ಕಾಲೇಜುಗಳ ಮಧ್ಯೆ ಸೆಮಿನಾರ್, ಕಾರ್ಯಾಗಾರ, ಮಾನವ ಸರಪಳಿ ರಚನೆ, ವಿದ್ಯಾರ್ಥಿಗಳ ಮತ್ತು ಜನಸಮೂಹದ ಜಾಥಗಳು ಹಾಗೂ ಬೀದಿ ನಾಟಕ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಾದ ಮ್ಯಾರಥಾನ್, ವಾಕಥಾನ್, ಓಟ ಸೇರಿದಂತೆ ಇತರೆ ಕ್ರೀಡೆಗಳನ್ನು ಹಮ್ಮಿಕೊಳ್ಳುವುದು. ಎಲ್ಲಾ ಶಾಲಾ, ಕಾಲೇಜು ಆವರಣದಲ್ಲಿ ಸಸಿ ನೆಟ್ಟು, ನಶಾ ಮುಕ್ತ ಅಭಿಯಾನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮದ ಬಗ್ಗೆ ಜಾಲತಾಣವಾದ https://nmba.dosje.gov.in/contact/take-a-pledge?type=e-pedge ಮೂಲಕ e-pledge ತೆಗೆದುಕೊಂಡು ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.13 ರಂದು ಎಲ್ಲಾ ಶಾಲಾ, ಕಾಲೇಜು, ಮಹಾವಿದ್ಯಾಲಯಗಳ ವಿದ್ಯಾರ್ಥಿ, ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ಸ್ವೀಕರಿಸಬೇಕು. ಪ್ರತಿಜ್ಞೆ ಸ್ವೀಕರಿಸಿದ ಭಾವಚಿತ್ರಗಳನ್ನು ddwobidar@gmail.com ಗೆ ಕಳುಹಿಸಬೇಕು ಎಂದು ಅವರು ತಿಳಿಸಿದ್ದಾರೆ.