ಬೀದರ್ ನಲ್ಲಿ ಧಾರಾಕಾರ ಮಳೆ : ರೈತರಲ್ಲಿ ಸಂತಸ
Update: 2025-06-30 21:20 IST
ಸಾಂದರ್ಭಿಕ ಚಿತ್ರ
ಬೀದರ್ : ನಗರದಲ್ಲಿ ಇಂದು ಮುಂಜಾನೆಯಿಂದ ಮೋಡ ಕವಿದ ವಾತಾವರಣವಿತ್ತು. ಇದೀಗ ಧಾರಾಕಾರ ಮಳೆ ಸುರಿಯುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯ ಬಹುತೇಕ ರೈತರು ಹೊಲದಲ್ಲಿ ಬಿತ್ತಣಿಕೆ ಮಾಡಿದ್ದರು. ಆದರೆ ಮಳೆ ಬಾರದೆ ಆತಂಕದಲ್ಲಿದ್ದರು. ಕೆಲ ಹಳ್ಳಿಗಳ ರೈತರಂತೂ ಮಳೆ ಬರಬೇಕು ಎಂದು ಭಜನೆ ಮಾಡುತ್ತಾ ಹಳ್ಳಿ ಹಳ್ಳಿ ತಿರಗುತ್ತಾ ಸಾಗಿದ್ದರು. ಬಿತ್ತಿದ ಹೊಲಗಳಲ್ಲೆಲ್ಲ ಮಳೆ ಇಲ್ಲದೇ ಮೊಳಕೆಗಳು ಒಣಗತೊಡಗಿದವು. ಇದೀಗ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ರೈತರ ಮುಖದಲ್ಲಿ ಸಂತಸ ಮೂಡಿದೆ. ಈ ಮಳೆಯಿಂದಾಗಿ ಬಿತ್ತಿದ ಬೆಳೆಗಳು ಚೆನ್ನಾಗಿ ಬೆಳೆಯುತ್ತವೆ ಎಂದು ಹೇಳಬಹುದು.