ಹುಲಸೂರು: ಒಂದೊಮ್ಮೆ ದಕ್ಷಿಣ ಭಾರತವನ್ನೇ ವ್ಯಾಪಿಸಿದ್ದ ಕರ್ನಾಟಕವು ವಿವಿಧ ರಾಜವಂಶಗಳ ಆಡಳಿತ ಹಾಗೂ ರಾಜಕೀಯ ಬೆಳವಣಿಗೆಗಳಿಂದಾಗಿ ವಿಭಜನೆಗೊಂಡಿತ್ತು. ಟಿಪ್ಪು ಸುಲ್ತಾನ್ ಆಳ್ವಿಕೆಯ ನಂತರ ಕನ್ನಡ ಭಾಷಿಕ ಪ್ರದೇಶಗಳು ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಉಪಾಧ್ಯಕ್ಷ ಬಿ.ಆರ್. ಕವಟೆ ಹೇಳಿದರು.

ಪಟ್ಟಣದ ಗುರು ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಭಾಷಿಕ ಪ್ರದೇಶಗಳು ಬ್ರಿಟಿಷರ ಆಡಳಿತದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದವು. ಕನ್ನಡಿಗರ ಏಕೀಕರಣ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯ ರಚನೆಯಾಯಿತು. 1973ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಗಡಿಭಾಗದ ಕನ್ನಡಿಗರ ನೆಲೆಗಳ ಸೇರ್ಪಡೆಗೂ ಹೋರಾಟದ ಅಗತ್ಯವಿದೆ ಎಂದರು.

ರೈತ ಮುಖಂಡ ಶಂಕರಗೌಡ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಸಾಹಿತ್ಯದ ರಕ್ಷಣೆಯಲ್ಲಿ ಕಾರ್ಮಿಕರು, ರೈತರು, ಶೋಷಿತರು ಮತ್ತು ಕನ್ನಡಪರ ಸಂಘಟನೆಗಳ ಜತೆಗೆ ಕನ್ನಡ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ್ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಶೇರಿಕಾರ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜುನಾಥ್ ಪಾರಣ್ಣ, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ವೀರಮ್ಮ ಕಟಾಳೆ, ತಾಲ್ಲೂಕಾಧ್ಯಕ್ಷ ಕೇದಾರನಾಥ್ ಭೋಪಳೆ, ಆಟೋ ವಾಹನಗಳ ಸಂಘಟನೆಯ ತಾಲ್ಲೂಕಾಧ್ಯಕ್ಷ ರಫೀಕ್ ಮೇಹಕರವಾಲೆ, ಸಾಮಾಜಿಕ ಕಾರ್ಯಕರ್ತ ಅರವಿಂದ್ ಹರಿಪಲೆ, ಬಸವರಾಜ್ ಚೌರೆ, ರಾಜಕುಮಾರ್ ನಿಡೋದೆ, ನಾಗನಾಥ್ ತೊಗರಗೆ, ಸುನೀಲ್ ಭೂಜಂಗೆ, ಜಗನ್ನಾಥ್ ಬೋಪಳೆ, ರವೀಂದ್ರ ತೋಗರಖೇಡೆ, ಬಾಬುರಾವ್ ಹಾಲಹಳ್ಳಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ರಾಜಕುಮಾರ ತೊಂಡಾರೆ ಸ್ವಾಗತಿಸಿದರು. ಪಲ್ಲವಿ ಸಂಸ್ಥಾನ ಮಠ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor