×
Ad

ಕುಷ್ಠರೋಗ ಒಂದು ಸಾಂಕ್ರಾಮಿಕ ರೋಗ, ಯಾವುದೇ ಶಾಪದಿಂದ ಬರುವುದಿಲ್ಲ : ಡಾ.ಧ್ಯಾನೇಶ್ವರ್ ನಿರಗುಡಿ

Update: 2025-01-30 17:47 IST

ಬೀದರ್ : ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಯಾವುದೇ ಶಾಪ, ಪಾಪದಿಂದ ಬರುವುದಿಲ್ಲ. ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಜಿಲ್ಲೆಯು ಕುಷ್ಠರೋಗ ಮುಕ್ತವಾಗಿ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ್ ನಿರಗುಡಿ ಹೇಳಿದರು.

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನ ನಿಮಿತ್ಯ ʼಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2025ʼರ ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಅರಿವು ಅಭಿಯಾನದ ಚಾಲನೆ ನೀಡಿ ಅವರು ಮಾತನಾಡಿದರು.

ಕುಷ್ಠರೋಗವು ಒಂದು ಸಾಂಕ್ರಮಿಕ ರೋಗವಾಗಿದ್ದು, ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದ್ದಾಗಿದೆ. ದೇಹದ ಯಾವುದೇ ಭಾಗದಲ್ಲಿ ಸ್ವರ್ಶಜ್ಞಾನವಿಲ್ಲದ ತಿಳಿ, ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳಿದ್ದಲ್ಲಿ ಅದು ಕುಷ್ಠರೋಗದ ಲಕ್ಷಣಗಳಾಗಿರಬಹುದು. ಯಾವುದೇ ತರಹದ ಮಚ್ಚೆಗಳು ಇದಲ್ಲಿ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಕ್ಷೀಸಬೇಕು. ರೋಗ ಕಂಡು ಬಂದಲ್ಲಿ ಬಹು ಔಷಧಿ ಚಿಕಿತ್ಸೆಯಿಂದ ಗುಣ ಪಡಿಸಬಹುದು. ಇದಕ್ಕೆ ಯಾವುದೇ ರೀತಿಯ ಹೆದರುವಂತಹ ಅಗತ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ರಾಜಶೇಖರ್ ಪಾಟೀಲ್ ಮಾತನಾಡಿ, ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮದಿನವಾಗಿದೆ. ಈ ದಿನ ರಾಷ್ಟ್ರೀಯ ಕುಷ್ಠರೋಗ ದಿನವೆಂದು ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕುಷ್ಟರೊಗದ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ 92 ಆಗಿದ್ದು, ಈ ವರ್ಷ 85 ಹೊಸ ಪ್ರಕರಣಗಳು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. ಸ್ಪರ್ಶ್ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಜ.30 ರಿಂದ ಫೆ.13 ರವರೆಗೆ ಜಿಲ್ಲಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವೀರಶೆಟ್ಟಿ ಚನ್ನಶೆಟ್ಟಿ, ಅರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಮಾಹಾದೇವ್ ಮಾಳಗೆ, ಡಾ.ಶಂಕ್ರಪ್ಪ ಬೊಮ್ಮಾ, ಡಾ.ದಿಲೀಪ್ ಡೊಂಗರೆ, ಡಾ.ಅನೀಲ್ ಚಿಂತಾಮಣಿ, ತಾಲ್ಲೂಕಾ ಅರೋಗ್ಯಾಧಿಕಾರಿ ಡಾ.ಸಂಗಾರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪಾ ಕಾಂಬಳೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ್ ಮಲ್ಲಿಗೆ, ಅನಿತಾ, ಮೋಹನದಾಸ್, ಸಿಬ್ಬಂದಿಗಳಾದ ಡಾ.ರೇಣುಕಾ, ಗೋರಖನಾಥ್, ಅಬ್ದುಲ್ ಹೈ, ಇಮಾನುವೇಲ್, ಶಾಮರಾವ್, ಮಹಮ್ಮದ್ ಅಫಜಲೋದ್ದಿನ್, ರಮೇಶ್, ಸಾಗರ್, ರಾಘವೇಂದ್ರ, ಜಾವಿದ್ ಕಲ್ಯಾಣಕರ್, ಅಶೋಕ್, ಜ್ಯೋತಿ, ಮಲ್ಲಿಕಾರ್ಜುನ ಗುಡ್ಡೆ, ಪ್ರಮೋದ್ ರಾಥೋಡ್, ಪರುಶುರಾಮ್, ಸಿಮಪ್ಪಾ, ರೇಣುಕಾ ತಾಂದಳೆ, ಶರಣಬಸಪ್ಪಾ, ಜಿಲಾನಿ, ರಾಕೇಶ್, ಸುರೇಶ್, ನರಸಿಂಗ್ ಹಾಗೂ ರೇವಣಪ್ಪಾ ಸೆರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News