ಬೀದರ್ | ಬಸ್-ಬೈಕ್ ನಡುವೆ ಢಿಕ್ಕಿ: ವ್ಯಕ್ತಿ ಮೃತ್ಯು
Update: 2025-05-23 14:45 IST
ಸಾಂದರ್ಭಿಕ ಚಿತ್ರ
ಬೀದರ್: ಕೆಎಸ್ಸಾರ್ಟಿಸಿ ಬಸ್ ಮತ್ತು ಬೈಕ್ ನಡುವೆ ಢಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಗುರುವಾರ ನೀಲಂನಳ್ಳಿ ತಾಂಡಾದ ಹತ್ತಿರ ನಡೆದಿದೆ.
ಅಮೀರಾಬಾದ್ ವಾಡಿಯ ನಿವಾಸಿ ಅಹಮ್ಮದ್ (26) ಮೃತಪಟ್ಟ ವ್ಯಕ್ತಿ.
ಮೃತ ಅಹಮ್ಮದ್ ಹಳ್ಳಿಖೇಡ್ ಗ್ರಾಮದಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದನು. ಈತ ಗುರುವಾರ ಸುಮಾರು 3 ಗಂಟೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ, ಬಸ್ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ಅಹಮ್ಮದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.