ಫೆ.27 ರಂದು ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿ ಪ್ರಧಾನ: ರಂಗಸ್ವಾಮಿ ಇಂಗಳದಾಳ್
ಬೀದರ್ : ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಹುಟ್ಟು ಹಬ್ಬದ ನಿಮಿತ್ಯ ಅವರಿಗೆ ಅಭಿನಂದಿಸುವ ಸಲುವಾಗಿ ಫೆ.27 ರಂದು ಸಂಜೀವಿನಿ ಜೀವನ ಟ್ರಸ್ಟ್ ವತಿಯಿಂದ ನೀಡಲ್ಪಡುವ ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಆಪತ್ ರಕ್ಷಕ ದಿನಾಚರಣೆ ಆಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ರಂಗಸ್ವಾಮಿ ಇಂಗಳದಾಳ್ ಅವರು ತಿಳಿಸಿದ್ದಾರೆ.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ವರ್ಷಗಳ ಚಿದ್ರದುರ್ಗದಲ್ಲಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಸ್ಥಾಪಿಸಲಾಯಿತು. ಕೋವಿಡ್ ಕಾಲದಲ್ಲಿ ಕೊರೊನಾ ವಾರಿಯರ್ಸಗಳಾಗಿ ಹಲವು ಕಾರ್ಯಗಳು ಕೈಗೊಂಡು ನೂರಾರು ಜನರ ಜೀವ ಉಳಿಸಿದೇವು. ಹಾಗೆಯೇ ಎಷ್ಟೊ ವಾರಸುದಾರರಿಲ್ಲದ ಶವಗಳಿಗೆ ಸಂಕೋಚವಿಲ್ಲದೆ ಶವ ಸಂಸ್ಕಾರ ಮಾಡಿದ್ದೇವೆ ಎಂದು ತಿಳಿಸಿದರು.
ಎರಡು ವರ್ಷಗಳಿಂದ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷ ಬೀದರ್, ವಿಜಯಪುರ್, ರಾಯಚುರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ಒಟ್ಟು 15 ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ವಿವರಿಸಿದರು.
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನ ಜಿಲ್ಲಾಧ್ಯಕ್ಷ ರತ್ನದೀಪ್ ಕಸ್ತುರೆ ಮಾತನಾಡಿ, ಆರೋಗ್ಯ, ಶೈಕ್ಷಣಿಕ, ಸಾಮಾಜಿಕ, ಮಾಧ್ಯಮಿಕ, ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 15 ಜನ ಸಾಧಕರಿಗೆ ಈ ತಿಂಗಳ 27 ರಂದು ನಗರದ ಕರ್ನಾಟಕ ಸಾಹಿತ್ಯ ಸಂಗದ ಸಾಂಸ್ಕೃತಿಕ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ಸಂಜೀವಿನಿ ಪ್ರಸಸ್ತಿ ಪ್ರದಾನ ಮಾಡಲಾಗುತ್ತಿದೆ. ಸಾಧಕರು ನಮ್ಮ ಬಳಿ ತಮ್ಮ ಸಾಧನೆಗೆ ಸಂಬಂಧಿಸಿದ ಅರ್ಜಿ ಜೊತೆಗೆ ಅಗತ್ಯ ಸಾಧಕ ದಾಖಲೆಗಳು ಸಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಧರ್ ಭತ್ತನಯನಹಟ್ಟಿ, ಪ್ರಮುಖರಾದ ಜಾನಸನ್ ಘೋಡೆ, ಸಚೀನ್ ಗಿರಿ, ಸುನಿಲ್ ಮಿತ್ರಾ, ಆನಂದ್ ಕಾಂಬಳೆ, ಪ್ರಕಾಶ್ ಕಾಂಬಳೆ ಹಾಗೂ ಉತ್ತಮ್ ಗಾಯಕವಾಡ್ ಸೇರಿದಂತೆ ಇತರರು ಇದ್ದರು.