ಸಾಹಿತ್ಯ ಅಕಾಡೆಮಿಯ ಕಲ್ಬುರ್ಗಿ ವಿಭಾಗೀಯ ಮಟ್ಟದ ಕವಿಗೋಷ್ಠಿಗೆ ಯುವಕವಿ ಅಜಿತ್.ಎನ್ ನೇಳಗಿ ಆಯ್ಕೆ
Update: 2025-06-14 21:08 IST
ಬೀದರ್ : ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರ್ಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಗೆ ಬೀದರ್ ಜಿಲ್ಲೆಯಿಂದ ಅಜಿತ್.ಎನ್ ನೇಳಗಿ ಅವರು ಆಯ್ಕೆಯಾಗಿದ್ದಾರೆ.
ಜೂ.17 ರ ಬೆಳಗ್ಗೆ 10 ಗಂಟೆಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ವಿಜಯನಗರ ಮಹಾವಿದ್ಯಾಲಯದಲ್ಲಿ ಕವಿಗೋಷ್ಠಿ ಜರುಗಲಿದ್ದು, ಜಿಲ್ಲೆಯಿಂದ ಆಯ್ಕೆಯಾಗಿರುವ ಅಜಿತ್ ಅವರು ಪಾಲ್ಗೊಂಡು ಕವಿತೆ ವಾಚಿಸಲಿದ್ದಾರೆ.