×
Ad

ಪ್ಯಾರಿಸ್‌ ಒಲಿಂಪಿಕ್ಸ್‌ | ಜಾವಲಿನ್‌ ಥ್ರೋನಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡ ನೀರಜ್‌ ಚೋಪ್ರಾ

Update: 2024-08-09 01:15 IST

Photo : businesstoday.in

ಪ್ಯಾರಿಸ್ : ಪ್ಯಾರಿಸ್‌ ಒಲಿಂಪಿಕ್ಸ್‌ ನ ಬಹುನಿರೀಕ್ಷಿತ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ 89.45 ಮೀಟರ್ ಎಸೆದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ಪಾಕಿಸ್ತಾನದ ನದೀಮ್ ಅರ್ಷದ್ 92.97 ಮೀಟರ್ ದೂರ ಜಾವಲಿನ್ ಎಸೆದು, ಒಲಿಂಪಿಕ್ ರೆಕಾರ್ಡ್ ತನ್ನ ಹೆಸರಿಗೆ ಬರೆಯುವ ಮೂಲಕ ಚಿನ್ನ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ ಸೆನ್ ಅವರು 90.57 ಮೀಟರ್ ದೂರಕ್ಕೆ ಜಾವಲಿನ್ ಎಸೆದು ಒಲಿಂಪಿಕ್ ರೆಕಾರ್ಡ್ ಮಾಡಿದ್ದರು.

ನೀರಜ್ ಚೋಪ್ರಾ ಅವರು ಈ ಕ್ರೀಡಾಕೂಟದ ಫೈನಲ್ ನಲ್ಲಿ 3 ಫೌಲ್ ಮಾಡಿದರು. ಎರಡು ಎಸೆತ ಮಾತ್ರ ಮಾನ್ಯವಾಗಿತ್ತು.

ಗ್ರೆನೆಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ಜಾವಲಿನ್ ಎಸೆದು ಕಂಚಿನ ಪದಕ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News