×
Ad

ಕುಸಿತ ಕಂಡ ಚಿನ್ನದ ದರ; ಇಂದಿನ ದರವೆಷ್ಟು?

Update: 2026-01-22 12:21 IST

ಸಾಂದರ್ಭಿಕ ಚಿತ್ರ (AI)

ಸತತವಾಗಿ ಏರುತ್ತಿದ್ದ ಚಿನ್ನ ಬುಧವಾರ ಗರಿಷ್ಠ ಏರಿಕೆ ಕಂಡ ಮೇಲೆ ಗುರುವಾರ ಹಠಾತ್ ಆಗಿ ಕುಸಿತ ಕಂಡಿದೆ.

ನಿರಂತರವಾಗಿ ಏರು ಹಾದಿಯಲ್ಲಿದ್ದ ಚಿನ್ನದ ದರ ಗುರುವಾರ ಜ. 22ರಂದು ಭಾರೀ ಕುಸಿತ ಕಂಡಿದೆ. 2026 ಜ. 22ರ ರಾಯಿಟರ್ಸ್‌ ವರದಿ ಪ್ರಕಾರ, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗ್ರೀನ್‌ ಲ್ಯಾಂಡ್‌ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದರಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ, ಸುಂಕ ಬೆದರಿಕೆಗಳಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.

24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 15,431 ರೂ. ಆಗಿದ್ದು, ನಿನ್ನೆ 15,660 ರೂ. ಇತ್ತು. ಬುಧವಾರಕ್ಕೆ ಹೋಲಿಸಿದರೆ ಇಂದು ಪ್ರತೀ ಗ್ರಾಂನಲ್ಲಿ 229 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 14,145 ರೂ. ಆಗಿದ್ದು, ಬುಧವಾರ 14,355 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 210 ರೂ. ಇಳಿಕೆಯಾಗಿದೆ. ಸಾಮಾನ್ಯವಾಗಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಹೋಲಿಸಿದರೆ 18 ಕ್ಯಾರೆಟ್ ಚಿನ್ನ ಕಡಿಮೆ ಇರುತ್ತದೆ. ಇಂದು 18 ಕ್ಯಾರೆಟ್ ಚಿನ್ನದ 1 ಗ್ರಾಂ ಚಿನ್ನದ ಬೆಲೆ 11,573 ರೂ. ಆಗಿದ್ದು, ಬುಧವಾರ 11,745 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 172 ರೂ. ಇಳಿಕೆ ಕಂಡಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಗುರುವಾರ ಜನವರಿ 22ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಹಠಾತ್ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,431 (-229) ರೂ. ಗೆ ಇಳಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,145 (-210) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,573 (-172) ರೂ. ಬೆಲೆಗೆ ತಲುಪಿದೆ.

ಸ್ಪಾಟ್ ಚಿನ್ನದ ಬೆಲೆ

ರಾಯಿಟರ್ಸ್ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನವರಿ 22ರಂದು ಸ್ಪಾಟ್ ಚಿನ್ನದ ಬೆಲೆ ಇಳಿಕೆ ಕಂಡಿದೆ. ಜಿಎಂಟಿ ಸಮಯ ಬೆಳಿಗ್ಗೆ 03:32 ಸಮಯಕ್ಕೆ ಸರಿಯಾಗಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ಗೆ ಸುಮಾರು ಶೇಕಡಾ 1ರಷ್ಟು ಕುಸಿತದೊಂದಿಗೆ 4,793.63 ಡಾಲರ್ ಮಟ್ಟಕ್ಕೆ ತಲುಪಿದೆ. ಇದಕ್ಕೂ ಮೊದಲು ನಡೆದ ವಹಿವಾಟಿನಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 4,887.82 ಡಾಲರ್‌ಗಳಷ್ಟು ದಾಖಲೆ ಗರಿಷ್ಠ ಮಟ್ಟವನ್ನು ತಲುಪಿತ್ತು.

ಭಾರತದಲ್ಲಿ ಬೆಳ್ಳಿ ದರ ಎಷ್ಟಿದೆ?

ಭಾರತದಲ್ಲಿ ಇಂದು ಬೆಳ್ಳಿ ಬೆಲೆಯೂ ಕೊಂಚ ಮಟ್ಟಿಗೆ ಕುಸಿತದತ್ತ ಸಾಗಿದೆ. ಇಂದು ಒಂದು ಗ್ರಾಂ ಬೆಳ್ಳಿ ದರ 325 ರೂ. ಇದೆ. ಆದರೆ ಬುಧವಾರಕ್ಕೆ ಹೋಲಿಸಿದರೆ 330 ರೂ. ಇತ್ತು. ನಿನ್ನೆಗಿಂತ ಇಂದು 5 ರೂ. ಕಡಿಮೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News