×
Ad

ಖತರ್ ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ದಾಳಿ: ದೃಢಪಡಿಸಿದ ಇರಾನ್

Update: 2025-06-23 22:43 IST

PC : X 

ದುಬೈ: ಖತರ್ ನ ಅಲ್ ಉದೈದ್ ವಾಯುನೆಲೆಯಲ್ಲಿ ನೆಲೆಗೊಂಡಿರುವ ಅಮೆರಿಕದ ಪಡೆಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಅಮೆರಿಕದ ಆಕ್ರಮಣಕ್ಕೆ ಇರಾನ್ನ ಸಶಸ್ತ್ರ ಪಡೆಗಳಿಂದ ಪ್ರಬಲ ಮತ್ತು ಯಶಸ್ವಿ ಪ್ರತಿಕ್ರಿಯೆ", ಎಂದು ಇರಾನ್ ನ ದೂರದರ್ಶನದಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ.

ಇರಾನ್‌ ನ ಬೆದರಿಕೆಗಳ ನಡುವೆ ಮುನ್ನೆಚ್ಚರಿಕೆಯ ಕ್ರಮವಾಗಿ ಖತರ್ ತನ್ನ ವಾಯುಪ್ರದೇಶವನ್ನು ಮುಚ್ಚಿದ ಸ್ವಲ್ಪ ಸಮಯದ ನಂತರ ಈ ದಾಳಿ ಸಂಭವಿಸಿದೆ. ಆಕಾಶದಲ್ಲಿ ಕ್ಷಿಪಣಿಗಳಂತೆ ಕಾಣುವ ಅಗ್ನಿ ಜ್ವಾಲೆಗಳನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಅಸೋಸಿಯೇಟೆಡ್ ಪ್ರೆಸ್ ಗೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News