×
Ad

ಇಂಡಿಗೊ ವಿಮಾನಗಳ ಅವ್ಯವಸ್ಥೆಗೆ ಸರಕಾರದ ಏಕಸ್ವಾಮ್ಯ ಮಾದರಿಯೇ ಕಾರಣ: ರಾಹುಲ್‌ ಗಾಂಧಿ ಟೀಕೆ

Update: 2025-12-05 12:01 IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Photo: PTI)

ಹೊಸದಿಲ್ಲಿ: ಇಂಡಿಗೊ ವಿಮಾನಗಳ ಕಾರ್ಯಾಚರಣೆ ರದ್ದತಿಯಿಂದ ಪ್ರಯಾಣಿಕರ ಪರದಾಟದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದಕ್ಕೆ ಸರಕಾರದ ಏಕಸ್ವಾಮ್ಯ ಮಾದರಿಯೇ ಕಾರಣ ಎಂದು ಆರೋಪಿಸಿದ್ದಾರೆ. ಭಾರತಕ್ಕೆ ಪ್ರತಿ ಕ್ಷೇತ್ರದಲ್ಲೂ ನ್ಯಾಯಯುತ ಸ್ಪರ್ಧೆ ಬೇಕು ಎಂದು ಹೇಳಿದ್ದಾರೆ.

ಇಂಡಿಗೊ ವಿಮಾನಯಾನ ಸಂಸ್ಥೆ ಗುರುವಾರ 550ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಮತ್ತು ಶುಕ್ರವಾರ ಸುಮಾರು 400 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು. ಇದರಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ರಾಹುಲ್‌ ಗಾಂಧಿ, ಇಂಡಿಗೋ ಏರ್‌ಲೈನ್ಸ್‌ನಲ್ಲಿನ ಗೊಂದಲವು ಸರಕಾರದ ಏಕಸ್ವಾಮ್ಯ ಮಾದರಿಯ ಪರಿಣಾಮ. ವಿಳಂಬ, ರದ್ದತಿ ಮತ್ತು ಅಸಹಾಯಕತೆಯ ರೂಪದಲ್ಲಿ ಸಾಮಾನ್ಯ ಭಾರತೀಯರು ಇದಕ್ಕೆ ಬೆಲೆ ತೆರುತ್ತಿದ್ದಾರೆ. ಭಾರತವು ಪ್ರತಿಯೊಂದು ವಲಯದಲ್ಲೂ ಮ್ಯಾಚ್‌ ಫಿಕ್ಸಿಂಗ್‌ ಬದಲು ನ್ಯಾಯಯುತ ಸ್ಪರ್ಧೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News