×
Ad

ಲೆಬನಾನ್ ನ ಬೈರುತ್ ನಲ್ಲಿ ವಾಕಿಟಾಕಿ ಸ್ಫೋಟ

Update: 2024-09-18 20:17 IST

Photo : x/@MarioNawfal

ಬೈರೂತ್ : ಮಂಗಳವಾರದ ಸರಣಿ ಪೇಜರ್ ಸ್ಫೋಟದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಲೆಬನಾನಿನಲ್ಲಿ ಬುಧವಾರ ಹಿಜ್ಬುಲ್ಲಾಗಳನ್ನು ಗುರಿಯಾಗಿಸಿ ಸರಣಿ ವಾಕಿಟಾಕಿ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.

ಬೈರೂತ್, ಬೆಕಾ ಕಣಿವೆ ಮತ್ತು ದಕ್ಷಿಣ ಲೆಬನಾನ್‍ಲ್ಲಿ ವಾಕಿಟಾಕಿ(ಕೈಯಲ್ಲಿ ಹಿಡಿಯಬಹುದಾದ ದ್ವಿಮುಖ ರೇಡಿಯೊ ಟ್ರಾನ್ಸ್‍ಸಿವರ್) ಸ್ಫೋಟ ಸಂಭವಿಸಿದೆ. ಸತತ ಎರಡನೇ ದಿನ ಲೆಬನಾನಿನಾದ್ಯಂತ ಸಂಭವಿಸಿರುವ ಸರಣಿ ಸ್ಫೋಟದಿಂದ ಜನರು ಆತಂಕಕ್ಕೆ ಒಳಗಾದರು.

ಮಂಗಳವಾರದ ಪೇಜರ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ನಡೆಯುತ್ತಿದ್ದ ಸ್ಥಳದ ಬಳಿಯಲ್ಲೇ ಕನಿಷ್ಠ ಒಂದು ಸ್ಫೋಟ ಸಂಭವಿಸಿದ್ದು ಸೇರಿದ್ದ ಜನರು ಗಾಬರಿಯಿಂದ ಓಡಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News