×
Ad

ಬ್ರೆಝಿಲ್‌ ನಲ್ಲಿ ಎಕ್ಸ್ ಕಾರ್ಯಾಚರಣೆ ಬಂದ್!

Update: 2024-08-17 23:46 IST

Photo :  freepik.com

ಸಾವೊಪಾಲೊ : ಬ್ರೆಝಿಲಿನ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಅವರು ಎಕ್ಸ್ ಗೆ ಸೆನ್ಸಾರ್ ಮಾಡಲು ಆದೇಶ ನೀಡಿದ ಬಳಿಕ, ಸಾಮಾಜಿಕ ಜಾಲತಾಣ ಎಕ್ಸ್ ಬ್ರೆಝಿಲ್ ನಲ್ಲಿ ತನ್ನ ಕಾರ್ಯಾಚರಣೆ ನಿಲ್ಲಿಸುವುದಾಗಿ ಶನಿವಾರ ಘೋಷಿಸಿದೆ.

ಎಕ್ಸ್ ನಿಂದ ಕೆಲವು ವಿಷಯಗಳನ್ನು ತೆಗೆದುಹಾಕುವ ಕಾನೂನುಗಳನ್ನು ಪಾಲಿಸದೇ ಇದ್ದರೆ, ಬ್ರೆಝಿಲ್ ನಲ್ಲಿ ರುವ ಎಕ್ಸ್ ನ ಕಾನೂನು ಪ್ರತಿನಿಧಿಗಳನ್ನು ಬಂಧಿಸುವುದಾಗಿ ನ್ಯಾಯಾಧೀಶರು ಹೇಳಿದ ನಂತರ ಎಕ್ಸ್ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಬ್ರೆಝಿಲ್ ನಲ್ಲಿ ಎಕ್ಸ್ ತನ್ನ ಕಾರ್ಯಾಚರಣೆ ನಿಲ್ಲಿಸಿದ ಬಳಿಕವೂ, ಅಲ್ಲಿನ ನಾಗರೀಕರಿಗೆ ಎಕ್ಸ್ ಲಭ್ಯವಾಗಲಿದೆ ಎಂದು ಎಲಾನ್ ಮಸ್ಕ್ ಅವರ ಒಡೆತನದ ಸಂಸ್ಥೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News