ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ತಮಿಳುನಾಡು ವಿರುದ್ದ ಕರ್ನಾಟಕ ತಂಡಕ್ಕೆ ಜಯ
ಸಿದ್ದಯ್ಯನಪುರದ ವಿದ್ಯಾರ್ಥಿಯ ಸಾಧನೆ
ಚಾಮರಾಜನಗರ: ಗುಜರಾತ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ತಮಿಳುನಾಡು ತಂಡ ವಿರುದ್ಧ ಜಯಭೇರಿ ಭಾರಿಸಿ ಚಾಮರಾಜನಗರಕ್ಕೆ ಆಗಮಿಸಿದ ತಾಲೂಕಿನ ಸಿದ್ದಯ್ಯನಪುರದ ವಿದ್ಯಾರ್ಥಿ, ಕ್ರೀಡಾಪಟು ಚಂದನ್ ಅವರನ್ನು ಜಿಲ್ಲಾಡಳಿತ, ನಾನಾ ಸಂಘಸಂಸ್ಥೆಯ ಮುಖಂಡರು, ಸಿದ್ದಯ್ಯನಪುರ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡರು.
ಚಾಮರಾಜನಗರದ ಎಲ್‌ಐಸಿ ಕಚೇರಿಯ ಸಮೀಪದಲ್ಲಿ ಮೈಸೂರಿನಿಂದ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಶಾಲು ಹೊದಿಸಿ, ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಪುಷ್ಪವೃಷ್ಠಿಗೈದು, ಸಿಹಿ ತಿನ್ನಿಸಿ ಜೈಕಾರ ಕೂಗಿ ಬರಮಾಡಿಕೊಂಡು ಸಂಭ್ರಮಿಸಿದರು.
ನಂತರ ನಂಜನಗೂಡು ರಸ್ತೆ, ಸಂತೇಮರಹಳ್ಳಿ ವೃತ್ತ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸುಲ್ತಾನ್ ಷರೀಫ್ ವೃತ್ತ ಮೂಲಕ ಡಿವಿಯೇಷನ್ ರಸ್ತೆ, ಶ್ರೀ ಭುವನೇಶ್ವರಿ ವೃತ್ತ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಾಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಭಾರತೀಯ ವಿದ್ಯಾರ್ಥಿ ಸಂಘ, ಭಾರತೀಯ ವೀರಶೈವ ಮಹಾಸಭಾ, ಸೇನಾಪಡೆ, ಡಾ.ಬಿ.ಆರ್.ಅಂಬೇಡ್ಕರ್ ಮಹಾ ಸಭಾ, ಸಿದ್ದಯ್ಯನಪುರ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ, ಸಿದ್ದಯ್ಯನಪುರ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ರಾಷ್ಟ್ರೀಯ ಖೋಖೋ ಪಂದ್ಯಾವಳಿ ವಿಜೇತ ಚಂದನ್ ಮಾತನಾಡಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿ ಗೆದ್ದಿರುವುದ ತುಂಭಾ ಖುಷಿ ತಂದಿದೆ. ಈ ನನ್ನ ಗೆಲವು ನಮ್ಮ ತಂದೆ, ತಾಯಿ, ದೊಡ್ಡಪ್ಪ .ಪಿಟ ಮಾಸ್ಕ, ಗ್ರಾಮಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಖೋಖೋ ಪಂದ್ಯಾವಳಿ ವಿಜೇತ ಚಂದನ್ ಹಾಗೂ ಇನ್ನಿಬ್ಬರಿಗೆ ಸನ್ಮಾನಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಂದನ್ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಖೋಖೋ ಪಂದ್ಯಾವಳಿಯಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾ ಗಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ, ಮಕ್ಕಳ ಕ್ರೀಡೆ ಪ್ರೋತ್ಸಾಹ ಕೊಡಬೇಕು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್‌ಗೆ ಅಡಿಟ್ಟುರಾ ಗಿರುತ್ತಾರೆ ಅಂತಹ ಸಂದರ್ಭದಲ್ಲಿ ಚಂದನ್ ಪೋಷಕರು ಪ್ರೋತ್ಸಾಹ ನೀಡಿ ದ್ದಾರೆ. ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕ್ರೀಡೆಗೆ ಒತ್ತು ಕೊಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಾಲ್ಮೀಕಿ ಅರ್ಚರಿ ಶಾಲೆಯ ಮಾದರಿಯಲ್ಲಿ ಜಿಲ್ಲೆಯಲ್ಲಿ ಕ್ರೀಡಾಶಾಲೆಗೆ ನಿರ್ಮಾಣಕ್ಕೆ ಚಿಂತಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಶಾಲಾ ಶಿಕ್ಷಣ ಇಲಾಖೆಯ ಉಉ ನಿರ್ಧೇಶಕ ಚಂದ್ರಪಾಟೀಲ್, ನಿವೃತ್ತ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ಧೇಶಕ ಮಂಜುನಾಥ್ ಪ್ರಸನ್ನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್ ರೇಣಕಾದೇವಿ, ಭರತ್ ಭೂಷಣ, ಮಹಾದೇವಸ್ವಾಮಿ, ಶಿವಕುಮಾರಯ್ಯ, ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಯೋಜಕ ಪರ್ವತ್ ರಾಜ್, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್,ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಉಮೇಶ್ ಕುದರ್, ಕರ್ನಾಟಕ ಸೇನಾಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಪಣ್ಯದಹುಂಡಿ ರಾಜು, ಲೋಕೇಶ್ ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷ ಮಹೇಶ್, ಬಿಎಸ್ ಪಿ ಮಹೇಶ್, ವಾಸು, ಬಾಬು, ಸಿದ್ದಯ್ಯನಪುರ ಗ್ರಾಮದ ಯಜಮಾನರು, ಮುಖಂಡರು, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.