×
Ad

ಚಾಮರಾಜನಗರ: ಬಿಳಿಗಿರಿರಂಗನ ಚಿಕ್ಕ ಜಾತ್ರೆ

Update: 2026-01-17 13:53 IST

ಚಾಮರಾಜನಗರ:  ಜಿಲ್ಲೆಯ ಯಳಂದೂರು ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿರುವ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಚಿಕ್ಕ ಜಾತ್ರೆ ಶುಕ್ರವಾರ ಜರುಗಿತು.

 ಸಾವಿರಾರು ಭಕ್ತರು ತೇರನ್ನು ಎಳೆದರು. ಜಾತ್ರೆಯ ನಿಮಿತ್ತ ರಥವನ್ನು ವಿವಿಧ ಬಣ್ಣಗಳಿಂದ ಅಲಂಕರಿಸಲಾಗಿತ್ತು. 

ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕರಾದ ಎನ್. ಮಹೇಶ್ ಹಾಗೂ ಎಸ್. ಬಾಲರಾಜು, ಜಿಲ್ಲಾಧಿಕಾರಿ ಶ್ರೀರೂಪಾ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಎಸ್.ಎಲ್. ನಯನ, ಡಿವೈಎಸ್‌ಪಿ ಧರ್ಮೇಂದ್ರ, ಸಿಪಿಐ ಸುಬ್ರಹ್ಮಣ್ಯ, ಶಿವಮಾದಯ್ಯ, ಪಿಎಸ್‌ಐ ಆಕಾಶ್, ಕರಿಬಸಪ್ಪ, ದೇಗುಲದ ಇಒ ಸುರೇಶ್, ಪಾರುಪತ್ತೇಗಾರ ರಾಜು, ಪ್ರಧಾನ ಅರ್ಚಕ ಎ.ಆರ್. ರವಿಕುಮಾರ್, ಎಸ್. ನಾಗೇಂದ್ರ ಭಟ್ ಹಾಗೂ ದೇಗುಲದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News