×
Ad

ಕಾಂಗ್ರೆಸ್ ಸರ್ಕಾರ ಐಸಿಯುವಿನಲ್ಲಿದೆ: ಆರ್.ಅಶೋಕ್ ವಾಗ್ದಾಳಿ

Update: 2025-11-05 14:35 IST

ಚಾಮರಾಜನಗರ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದ ಹಲವೆಡೆ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿದ್ದು,  ವೀಜಯೇಂದ್ರ ಅವರು ಪಾಲ್ಗೊಂಡಿದ್ದಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯ ಸರ್ಕಾರ ನೀರಾವರಿಗೆ ಮೀಸಲಿಟ್ಟಿದ್ದ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂದಿದೆ. ಈ ಸಲ ನೀರಾವರಿಗೆ ಬರುವಂತಹ ಶೇ. 30 ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ. ರಾಜ್ಯ ಸರ್ಕಾರದ ಈ ನಡೆ ರೈತಕುಲಕ್ಕೆ ವಿಷವಾಗಿದೆ ಎಂದರು.

ದೇಶದ ಸೇನೆ ಕೇವಲ 10% ಜನರ ಕೈಯಲ್ಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಮನುಷ್ಯನಿಗೆ ಸ್ವಲ್ಪ ನಾಲೆಡ್ಜ್ ಆದ್ರೂ ಬೇಕು , ಹುಡುಗಾಟದ ಹುಡುಗ ಅಂತ ಅದ್ಯಾವ್ದೋ ಪಿಚ್ಚರ್ ಬಂದಿತ್ತಲ್ಲ ಅದಕ್ಕಿಂತ ವರ್ಸ್ಟ್ ಇವ.‌ ಬೇರೆ ದೇಶಕ್ಕೆ ಹೋದಾಗ ಭಾರತದ ಮಾನವನ್ನ ಹರಾಜು ಹಾಕೋದು ಇವನೇ. ಸೇನೆ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಹೇಳಿದರು. 

ಸೈನಿಕರಿಗೆ ಯಾವ ಜಾತಿ ಇದೆ ಹೇಳಿ? ಸೈನಿಕರಲ್ಲೂ ಜಾತಿ ಹುಡುಕುವ ನೀನ್ಯಾರು ಭಾರತೀಯನಾ ಅಥವಾ ಇಟಲಿಯವನಾ ಹೇಳ್ಬೇಕು. ನಮಗಂತೂ ಅರ್ಥ ಆಗ್ತಿಲ್ಲ. ಈವಾಗ ಕೋರ್ಟ್ ನಲ್ಲಿ ಕೇಸ್ ಬೇರೆ ನಡೀತಾ ಇದೆ. ಬಿಹಾರ ಚುನಾವಣೆಯಲ್ಲಿನ ಸೋಲಿನ ಭೀತಿಯಿಂದ ಈ ರೀತಿ ಮಾತನಾಡ್ತಿದ್ದಾರೆ. ಸುಮ್ನೆ ಅವನ ಬಗ್ಗೆ ಚರ್ಚೆ ಯಾಕೆ?  ಕಾಮನ್ ಸೆನ್ಸ್ ಇಲ್ದೆ ಇರೋ ವ್ಯಕ್ತಿ ಕೇಂದ್ರದಲ್ಲಿ ವಿಪಕ್ಷನಾಯಕನಾಗಿದ್ದಾನೆ. ಇಂತವರನ್ನ ನಾಯಕ ಅನ್ನೋಕೆ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗ್ಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News