ಸಾಂದರ್ಭಿಕ ಚಿತ್ರ | Photo: PTI 

ಚಿಕ್ಕಮಗಳೂರು: ತಪ್ಪು ಮಾಹಿತಿ ನೀಡಿ ಫಾರಂ ನಂ.7 ಸಲ್ಲಿಸಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತಗೆದು ಹಾಕಲು ಷಡ್ಯಂತ್ರ ರೂಪಿಸಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಪ್ಪ ತಹಶೀಲ್ದಾರ್ ಅವರಿಗೆ ಸುಧೀರ್ ಕುಮಾರ್ ಮುರೊಳ್ಳಿ ದೂರು ನೀಡಿದ್ದಾರೆ.

243 ಅರ್ಹ ಮತದಾರರ ವಿರುದ್ಧ ಆಕ್ಷೇಪಣೆಯನ್ನು ಬಿಜೆಪಿ ಪಕ್ಷದ ಮುಖಂಡರಾದ ಎಚ್.ಕೆ.ದಿನೇಶ್ ಹಾಗೂ ಆತನ ಸಹಚರರು ಫಾರಂ. ನಂ.7ರಲ್ಲಿ ಅರ್ಜಿ ಮೂಲಕ ತಪ್ಪು ಮಾಹಿತಿ ನೀಡಿ ಅರ್ಹ ಮತದಾರರ ಅನರ್ಹ ಮಾಡುವ ಬಗ್ಗೆ ಮಾಹಿತಿ ಇದ್ದು, ಜನಾಂಗೀಯ ದ್ವೇಷದಿಂದ ಶೃಂಗೇರಿ ಕ್ಷೇತ್ರದ ಮತದಾರರನ್ನು ಅನರ್ಹಗೊಳಿಸುವ ಕ್ರಿಮಿನಲ್ ಸಂಚು ರೂಪಿಸಿ ಅಕ್ರಮ ಕೂಟ ಕಟ್ಟಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಪ್ರಕ್ರಿಯೆಗೆ ಅಡ್ಡಿ ಮಾಡುವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದ್ದರಿಂದ ಅಕ್ರಮಕೂಟ ಕಟ್ಟಿ ಕ್ರಿಮಿನಲ್ ಸಂಚು ರೂಪಿಸಿ, ಜನಾಂಗೀಯ ದ್ವೇಷದಿಂದ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಫಾರಂ ನಂ.7 ಅರ್ಜಿ ದುರುಪಯೋಗ ಪಡಿಸಿಕೊಂಡವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor