‘ಜವಾನ್’ ಬಿಡುಗಡೆಗೆ ಒಂದು ತಿಂಗಳು ಬಾಕಿ; ಹೊಸ ಪೋಸ್ಟರ್ ಬಿಡುಗಡೆ ಮಾಡಿದ ಶಾರೂಕ್ ಖಾನ್
Photo credit: instagram.com/iamsrk
ಶಾರೂಕ್ ಖಾನ್ ಅಭಿನದ ‘ಜವಾನ್’ ಚಿತ್ರ ಬಿಡುಗಡೆಗೆ ಕೇವಲ ಒಂದು ತಿಂಗಳು ಬಾಕಿ. ಮಹತ್ವಾಕಾಂಕ್ಷಿ ಚಿತ್ರಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಶಾರೂಕ್ ಖಾನ್ ಚಿತ್ರದ ಹೊಸ ಪೋಸ್ಟರ್ ಬಿಡಯಗಡೆ ಮಾಡಿದ್ದಾರೆ.
ಈ ಪೋಸ್ಟರ್‍ನಲ್ಲಿ ಅವರು ಬೊಕ್ಕತಲೆಯ ಅವತಾರದಲ್ಲಿ ಬಂದೂಕು ಹಿಡಿದು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮತ್ತೊಂದು ಅವತಾರದಲ್ಲಿ ಶಾರೂಕ್ ಖಾನ್ ಅವರ ಬ್ಯಾಂಡೇಜ್ ಮಾಡಲಾದ ನೋಟ ಕೂಡಾ ಹಿನ್ನೆಲೆಯಲ್ಲಿ ಕಾಣಿಸುತ್ತಿದೆ.
'ಮೇ ಅಚ್ಚಾ ಹೂಂ, ಯಾ ಬುರಾ ಹೂಂ.. 30 ಡೇಸ್ ಟೂ ಫೈಂಡ್ ಔಟ್, ರೆಡಿ ಎಎಚ್? #1 ಮಂತ್ ಟೂ ಜವಾನ್# ಜವಾನ್ 2023ರ ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ" ಎಂಬ ಶೀರ್ಷಿಕೆಯಡಿ ಶಾರೂಕ್ ಖಾನ್ ಪೋಸ್ಟ್ ಮಾಡಿದ್ದಾರೆ.
ಜವಾನ್ ಚಿತ್ರವನ್ನು ಆಟ್ಲೇ ನಿರ್ದೇಶಿಸಿದ್ದಾರೆ. ನಯನತಾರಾ ಮತ್ತು ವಿಜಯ್ ಸೇತುಪತಿ, ಶಾರೂಖ್ ಜತೆಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಕೂಡಾ ಚಿತ್ರದಲ್ಲಿ ವಿಶೇಷ ಅಭಿನಯದಲ್ಲಿ ಕಾಣಿಸಿಕೊಂಡಿದ್ದಾರೆ.
ಜವಾನ್ ಅಭಿಯಾನಿಗಳು ಪ್ರಿಯಮಣಿ, ಸಾನ್ಯಾ ಮಲ್ಹೋತ್ರಾ ಮತ್ತು ರಿಧಿ ಡೋಗ್ರಾ ಅವರನ್ನೂ ಪ್ರಮುಖ ಪಾತ್ರಗಳಲ್ಲಿ ಕಾಣಲಿದ್ದರೆ. ಬಾಕ್ಸ್ ಆಫೀಸ್‍ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ ಪಠಾಣ್ ಚಿತ್ರದ ಬಳಿಕ 2023ರಲ್ಲಿ ಇದು ಶಾರೂಕ್ ಖಾನ್ ಅವರ ಎರಡನೇ ಬಿಡುಗಡೆಯಾಗಿದೆ.