ನೇಣು ಬಿಗಿದ ಸ್ಥಿತಿಯಲ್ಲಿ ಮಲಯಾಳಂ ನಟಿ ಅಪರ್ಣಾ ನಾಯರ್ ಮೃತದೇಹ ಪತ್ತೆ
Update: 2023-09-01 11:58 IST
ಅಪರ್ಣಾ ನಾಯರ್ (Photo: newsdrum.in)
ತಿರುವನಂತಪುರಂ: ಮಲಯಾಳಂ ಟಿವಿ ಮತ್ತು ಚಲನಚಿತ್ರ ನಟಿ ಅಪರ್ಣಾ ನಾಯರ್ ತಿರುವನಂತಪುರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ವರದಿಯ ಪ್ರಕಾರ, ಅಪರ್ಣಾ ನಿನ್ನೆ ರಾತ್ರಿ ಕರಮಾನದಲ್ಲಿರುವ ತಮ್ಮ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕರಮಾನ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅವರು ಪತಿ ಸಂಜಿತ್ ಮತ್ತು ಇಬ್ಬರು ಪುತ್ರಿಯರಾದ ತ್ರಯಾ ಮತ್ತು ಕೃತಿಕಾ ಅವರನ್ನು ಅಗಲಿದ್ದಾರೆ.
ಅಪರ್ಣಾ ನಾಯರ್ ಅವರು 'ಮೇಘತೀರ್ಥ', 'ಮುದ್ದುಗೌವ್', 'ಕಲ್ಕಿ', 'ಕಡಲು ಪರಂಜ' ಮುಂತಾದ ಚಲನಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದಾರೆ.
'ಆತ್ಮಸಖಿ' ಮತ್ತು 'ಚಂದನಮಝ'ದಂತಹ ಜನಪ್ರಿಯ ಧಾರವಾಹಿಗಳಲ್ಲೂ ಅಪರ್ಣಾ ನಟಿಸಿದ್ದಾರೆ.