×
Ad

17 ವರ್ಷ ಬಳಿಕ ಜತೆಯಾಗಿ ತೆರೆ ಮೇಲೆ ಕಾಣಿಸಲಿದೆ ಶಾರುಖ್ - ಅಮಿತಾಭ್ ಜೋಡಿ

Update: 2023-08-28 23:03 IST

ಅಮಿತಾಬ್ ಬಚ್ಚನ್ ಮತ್ತು ಶಾರೂಕ್ ಖಾನ್| Photo: twitter\ @Bollyhungama

ಬಾಲಿವುಡ್‍ನಲ್ಲಿ ದೊಡ್ಡ ಸುದ್ದಿ ಹರಿದಾಡುತ್ತಿದೆ! ಬಾಲಿವುಡ್‍ನ ಅತಿದೊಡ್ಡ ಇಬ್ಬರು ಸೂಪರ್ ಸ್ಟಾರ್‍ಗಳಾದ ಅಮಿತಾಬ್ ಬಚ್ಚನ್ ಮತ್ತು ಶಾರೂಕ್ ಖಾನ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲವಾದರೂ, 17 ವರ್ಷಗಳ ಬಳಿಕ ಒಂದೇ ಚಿತ್ರದಲ್ಲಿ ಬಿಗ್ ಬಿ ಹಾಗೂ ಎಸ್‍ಆರ್‍ಕೆ ಸಮ್ಮಿಲನದ ಸುದ್ದಿ ಇಡೀ ಉದ್ಯಮದಲ್ಲಿ ಮಿಂಚು ಸಂಚಾರಕ್ಕೆ ಕಾರಣವಾಗಿದೆ. 2006ರಲ್ಲಿ ಬಿಡುಗಡೆಯಾದ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದು ಕೊನೆಯ ಬಾರಿ.

ಕರಣ್ ಜೋಹರ್ 'ಕಭಿ ಅಲ್ವಿದಾ ನಾ ಕೆಹನಾ' ಚಿತ್ರಕಥೆ ಬರೆದು ನಿರ್ದೇಶಿಸಿದ್ದರು. ಇದರಲ್ಲಿ ಅಮಿತಾಬ್ ಬಚ್ಚನ್, ರಾಣಿ ಮುಖರ್ಜಿ, ಪ್ರೀತಿ ಝಿಂಟಾ ಹಾಗೂ ಕಿರನ್ ಖೇರ್ ಕೂಡಾ ನಟಿಸಿದ್ದರು. ನಿಷ್ಕ್ರಿಯ ಸಂಬಂಧಗಳ ಕಥಾನಕವನ್ನು ಈ ಚಿತ್ರ ಹೊಂದಿತ್ತು. ಬಚ್ಚನ್ ಹಾಗೂ ಶಾರೂಕ್ ಇಡೀ ಬಾಲಿವುಡ್ ಸಾಮ್ರಾಜ್ಯವನ್ನು ಸುಧೀರ್ಘ ಕಾಲ ಆಳಿದವರು. ಮತ್ತೆ ಈ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದನ್ನು ಚಿತ್ರರಸಿಕರು ಎದುರು ನೋಡುತ್ತಿದ್ದಾರೆ.

"ಉಭಯ ಸೂಪರ್‍ಸ್ಟಾರ್‍ಗಳು ಒಂದೇ ಚಿತ್ರದಲ್ಲಿ ನಡಿಸುವ ಕುತೂಹಲಕಾರಿ ಯೋಜನೆ ಇದೆ. ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಸುದ್ದಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಈ ಬಗ್ಗೆ ಇನ್ನಷ್ಟು ವಿಚಾರಗಳು ಬಹಿರಂಗವಾಗಲಿವೆ" ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News