×
Ad

"ನಮ್ಮ ಊರಿನಲ್ಲಿ ಭೇಟಿಯಾಗುತ್ತೇನೆ": ಸಾವಿನ ಸುಳ್ಳು ಸುದ್ದಿ ವೈರಲ್‌ ಆಗುತ್ತಿದ್ದಂತೆ ರಮ್ಯ ಪ್ರತಿಕ್ರಿಯೆ

Update: 2023-09-06 17:49 IST

ರಮ್ಯ (PTI) 

ಬೆಂಗಳೂರು: ನಟಿ, ಕಾಂಗ್ರೆಸ್‌ ರಾಜಕಾರಣಿ ರಮ್ಯ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ್ದು, ಈ ಕುರಿತು ಪ್ರತಿಕ್ರಿಯಿಸಿದ ನಟಿ ʼನಮ್ಮ ಊರಿನಲ್ಲಿ ಭೇಟಿಯಾಗೋಣ’ ಎಂದು ಪತ್ರಕರ್ತೆ ಚಿತ್ರ ಸುಬ್ರಮಣಿಯಮ್‌ ಗೆ ಪ್ರತಿಕ್ರಿಯಿಸಿದ್ದಾರೆ.

ಜಿನೇವಾ ಪ್ರವಾಸದಲ್ಲಿರುವ ನಟಿ ರಮ್ಯ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿತ್ತು.

ಈ ಸುದ್ದಿ ಹಬ್ಬುತ್ತಿದ್ದಂತೆ ನಟಿ ರಮ್ಯ ಜೊತೆ ಆಹಾರ ಸೇವಿಸುವ ಫೋಟೋವನ್ನು ಹಾಕಿದ್ದ ಪತ್ರಕರ್ತೆ ಚಿತ್ರ ಸುಬ್ರಮಣಿಯಮ್‌ ”ಜಿನೀವಾದಲ್ಲಿ ಭೋಜನಕ್ಕೆ ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ ದಿವ್ಯಸ್ಪಂದನಾ ಅವರ ಭೇಟಿಯಾಯಿತು. ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದೆವು” ಎಂದು ಟ್ವೀಟ್‌ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ರಮ್ಯ, “ನಮ್ಮ ಊರಿನಲ್ಲಿ ಭೇಟಿಯಾಗುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News