×
Ad

ಬಾಕ್ಸ್‌ ಆಫೀಸಿನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ 'ಗದರ್-2'

Update: 2023-08-14 21:25 IST

ಗದರ್ 2 | Photo: NDTV

ಮುಂಬೈ: ಹಿರಿಯ ನಟ ಸನ್ನಿ ಡಿಯೋಲ್‌ ಅವರ 'ಗದರ್ 2' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ನಾಗಲೋಟವನ್ನು ಮುಂದುವರೆಸಿದೆ. ಮೊದಲನೇ ದಿನದಂದು 40 ಕೋಟಿ ರೂಪಾಯಿಗಳು ಸಂಗ್ರಹವಾಗಿದ್ದು, ಎರಡನೇ ದಿನದಲ್ಲಿ 52 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ ಚಿತ್ರ ಈಗಾಗಲೇ 100 ಕೋಟಿ ಕ್ಲಬ್‌ ಸೇರಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.

boxofficeindia.com ವರದಿ ಮಾಡಿದ ಪ್ರಕಾರ ಗದರ್ 2 ಬಾಕ್ಸ್ ಆಫೀಸ್‌ನಲ್ಲಿ ಮೊದಲ ವಾರಾಂತ್ಯದಲ್ಲಿ ಅಂದಾಜು ರೂ 132 ಕೋಟಿ ರೂ.ಗಳನ್ನು ಗಳಿಸಿದೆ.

ಅನಿಲ್ ಶರ್ಮಾ ನಿರ್ದೇಶಿಸಿದ ಈ ಚಲನಚಿತ್ರವು ಸನ್ನಿ ಡಿಯೋಲ್‌ ಅವರ 2001 ರ ಬ್ಲಾಕ್‌ಬಸ್ಟರ್ 'ಗದರ್: ಏಕ್ ಪ್ರೇಮ್ ಕಥಾ' ಚಿತ್ರದ ಮುಂದುವರಿದ ಭಾಗವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News