100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ನಟ ಗೋವಿಂದ; ಕಾರಣವೇನು?

Update: 2026-08-23 18:07 IST

Photo Credit : Govinda/Instagram

ನಟ ಮತ್ತು ಮಾಜಿ ಸಂಸದ ಗೋವಿಂದ ಅವರು ತಮ್ಮ ವೈಯಕ್ತಿಕ ಮತ್ತು ಕುಟುಂಬದ ಜೀವನದ ಬಗ್ಗೆ ಸುಳ್ಳು ಮತ್ತು ಪರಿಶೀಲಿಸದೆ ಮಾಡಿರುವ ವರದಿಗಳ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಅಂತಹ ಪ್ರಕರಣಗಳಲ್ಲಿ ಸಂಬಂಧಿತ ಕಾನೂನಿನ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಮತ್ತು 100 ಕೋಟಿ ರೂ.ಗಳ ಪರಿಹಾರ ಕೋರಬಹುದು ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಎರಡನೇ ವಿವಾಹದ ವದಂತಿಗಳ ನಂತರ ನೀಡಲಾದ ನೋಟಿಸ್, ಇದೀಗ ಜನರು, ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗೆ ಎಚ್ಚರಿಕೆ ನೀಡಿದೆ. ಸುಳ್ಳು, ಮಾನಹಾನಿಕರ, ದುರುದ್ದೇಶಪೂರಿತ, ಪರಿಶೀಲಿಸದ ವಿಷಯವನ್ನು ರಚಿಸುವುದು, ಪ್ರಕಟಿಸುವುದು, ಅಪ್ಲೋಡ್ ಮಾಡುವುದು, ಪ್ರಸಾರ ಮಾಡುವುದು ಅಥವಾ ಹಂಚಿಕೊಳ್ಳುವುದರ ವಿರುದ್ಧ ನೋಟೀಸ್ ಎಚ್ಚರಿಕೆ ನೀಡಿದೆ.

ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ರಚಿಸಲಾದ ಛಾಯಾಚಿತ್ರಗಳ, ವೀಡಿಯೋಗಳು, ಆಡಿಯೋ ರೆಕಾರ್ಡಿಂಗ್ಗಳು, ತಿರುಚಿದ ಚಿತ್ರಗಳು ಡೀಪ್ಫೇಕ್ಗಳು ಮತ್ತು ಇತರ ಸಿಂಥೆಟಿಕ್ ಕಂಟೆಂಟ್ ಪ್ರಸರಣವನ್ನು ನೋಟೀಸ್ ನಿರ್ದಿಷ್ಟವಾಗಿ ಗುರುತಿಸಿದೆ. ಗೋವಿಂದ ಅವರ ಧ್ವನಿ, ಛಾಯಾಚಿತ್ರಗಳು, ಗುರುತು, ಹೋಲಿಕೆ ಅಥವಾ ಅವರ ಖಾಸಗಿ ಅಥವಾ ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು AI ಅಥವಾ ಇತರ ಡಿಜಿಟಲ್ ತಂತ್ರಜ್ಞಾನ ಬಳಸಿ ರಚಿಸಲು, ಕುಶಲತೆಯಿಂದ ಬಳಸಲು ಯಾವುದೇ ಅನುಮತಿ ನೀಡಿಲ್ಲ ಎಂದು ನೋಟೀಸ್ ಹೇಳಿದೆ.

ನೋಟೀಸ್ ಪ್ರಕಾರ, ಗೋವಿಂದ ಮಾನಹಾನಿ, ಗೌಪ್ಯತೆಯ ಅತಿಕ್ರಮಣ, ಗುರುತಿನ ದುರುಪಯೋಗ ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಿಸಿದ ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ನಾಗರಿಕ ಮತ್ತು ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ನೋಟೀಸ್ನಲ್ಲಿ ಭಾರತೀಯ ನ್ಯಾಯ ಸಂಹಿತೆ 2023, ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಕಾನೂನು ನಿಬಂಧನೆಗಳನ್ನು ಉಲ್ಲೇಖಿಸುತ್ತದೆ.

ಜವಾಬ್ದಾರರೆಂದು ಕಂಡುಬಂದ ವ್ಯಕ್ತಿಗಳ ವಿರುದ್ಧ ಗೋವಿಂದ ಅವರು ಬ್ಯಾಂಕ್ ಖಾತೆಗಳ ವಿರುದ್ಧ ಕ್ರಮ, ಆಸ್ತಿ ಖರೀದಿ ಅಥವಾ ಮಾರಾಟದ ಮೇಲಿನ ನಿರ್ಬಂಧ, ಪಾಸ್ಪೋರ್ಟ್ ವಶಪಡಿಸಿಕೊಳ್ಳುವುದು ಮತ್ತು ಇತರ ಕಾನೂನು ಕ್ರಮಗಳನ್ನು ಒಳಗೊಂಡ ನ್ಯಾಯಾಲಯದ ಆದೇಶಗಳನ್ನು ಕೋರಬಹುದು ಎಂದು ನೋಟೀಸ್ ಹೇಳುತ್ತದೆ.

ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಅಥವಾ ಸುಳ್ಳು ವಿಷಯವನ್ನು ಪ್ರಸಾರ ಮಾಡುತ್ತಿರುವುದಾಗಿ ಆರೋಪಿಸಲಾಗಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಕೋರಲಾಗಿದೆ. ಇದಕ್ಕೆ ಮೊದಲು ಗೋವಿಂದ ಅವರು ವಿಚ್ಛೇದನೆ ತೆಗೆದುಕೊಳ್ಳುವ ಬಗ್ಗೆಯೂ ವರದಿಗಳು ಪ್ರಸಾರವಾಗಿದ್ದವು. ನಂತರ ಅವುಗಳನ್ನು ಸುಳ್ಳು ಎಂದು ವಿವರಿಸಲಾಗಿದೆ.

ತಮ್ಮ ಘನತೆಗೆ ಹಾನಿ ಮಾಡುವ ಯೋಜಿತ ಪ್ರಯತ್ನದ ಭಾಗವಾಗಿ ವದಂತಿಗಳನ್ನು ಉದ್ದೇಶಪೂರ್ವಕವಾಗಿ ಹರಡಬಹುದು ಎಂಬ ಅವರ ಕಳವಳಗಳನ್ನು ನೋಟೀಸ್ ಉಲ್ಲೇಖಿಸುತ್ತದೆ. ಅಂತಹ ಚಟುವಟಿಕೆಗಳು ತಮಗೆ ಮಾನಸಿಕ ಮತ್ತು ಸಾಮಾಜಿಕ ಹಾನಿಯನ್ನುಂಟುಮಾಡುವ ಉದ್ದೇಶವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಸಂಬಂಧದ ಕುರಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.

Full View

ಆಗಸ್ಟ್ 19ರಂದು ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನಾ ಅರ್ಜಿಯನ್ನು ಸುನೀತಾ ಅಹುಜಾ ಹಿಂತೆಗೆದುಕೊಂಡಿದ್ದಾರೆ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ದೃಢಪಡಿಸಿದ್ದರು. “ಎರಡು ವರ್ಷಗಳಿಂದ ಈ ಬೆಳವಣಿಗೆಗಳು ನಡೆಯುತ್ತಿವೆ. ಅಂತಿಮವಾಗಿ ಎಲ್ಲವೂ ಮುಕ್ತಾಯವಾಗಿದೆ. ಇಂದು ಸುನೀತಾ ಅವರು ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದಿದ್ದಾರೆ” ಎಂದು ಅವರು ಹೇಳಿದ್ದರು.

ಗೋವಿಂದ ಅವರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ ಸಿನ್ಹಾ, “ಗೋವಿಂದ ಪ್ರಕರಣದ ಆರಂಭದಿಂದಲೂ ತಟಸ್ಥರಾಗಿದ್ದರು ಮತ್ತು ಈಗಲೂ ಹಾಗೆಯೇ ಇದ್ದಾರೆ” ಎಂದು ಹೇಳಿದ್ದರು. ಸುನೀತಾ ಅಹುಜಾ ಅವರ ಮಗ ಯಶವರ್ಧನ್ ಅಹುಜಾ ಜೊತೆಗೆ ಬಾಂದ್ರಾ ಕೌಂಟುಂಬಿಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದರು. ಪಾಪರಾಜಿಗಳು ಅವರ ಬೇಟಿಯ ಬಗ್ಗೆ ಕೇಳಿದಾಗ, “ಹುಟ್ಟುಹಬ್ಬ ಆಚರಿಸಲು ಬಂದಿದ್ದೇವೆ (Birthday manane aaye hai)” ಎಂದು ಹೇಳಿದ್ದರು.

Full View

ಗೋವಿಂದ ಅವರು ಈ ಮೊದಲು ಸುನೀತಾ ಅವರಿಗೆ “ಖ್ಯಾತಿ, ವೃತ್ತಿಜೀವನ ಮತ್ತು ಸಿನಿಮಾರಂಗದ ಸ್ಥಾನಮಾನದ ಮೇಲೆ ಪರಿಣಾಮ ಬೀರುವಂತಹ ಹೇಳಿಕೆಗಳನ್ನು ನೀಡದಂತೆ” ಮನವಿ ಮಾಡಿಕೊಳ್ಳುವ ವೀಡಿಯೋ ಒಂದನ್ನು ಹಂಚಿಕೊಂಡಿದ್ದರು.

ಗೋವಿಂದ ಅವರ ಸಂಪೂರ್ಣ ಕುಟುಂಬ ಅಭಿನಯದಲ್ಲಿ ತೊಡಗಿಸಿಕೊಂಡಿದೆ. ಅವರ ಮಗಳು ಟೀನಾ ಅಹುಜಾ ನಟಿ. ಅವರ ಮಗ ಯಶ್ವರ್ಧನ್ ಅಹುಜಾ ಅವರು ‘ಹೀರೋ ಕಿ ಹಾರರಿನ್’ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. 2027 ಜನವರಿ 7ರಂದು ಸಿನಿಮಾ ಬಿಡುಗಡೆಯಾಗಲಿದೆ. ಆ ಸಿನಿಮಾದಲ್ಲಿ ಸುನೀತಾ ಹುಜಾ ಅವರೂ ನಟಿಸಿದ್ದಾರೆ. ಸುನೀತಾ ಅವರು ಸಿನಿಮಾದಲ್ಲಿ ಯಶವರ್ಧನ್ ಅವರ ತಾಯಿಯ ಪಾತ್ರ ನಿರ್ವಹಿಸುವುದಾಗಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News