ವನ್ಯಜೀವಿ ಕಾರ್ಯಕರ್ತರಿಂದ ವಿರೋಧ: ಕೋತಿ ಜೊತೆಗಿನ ಇನ್ಸ್ಟಾಗ್ರಾಂ ರೀಲ್ ಡಿಲೀಟ್ ಮಾಡಿದ ನಟ ವಿಕ್ರಮ್

Update: 2026-08-11 15:08 IST

ನಟ ವಿಕ್ರಮ್ | Screengrab : X

ತಮಿಳು ನಟ ವಿಕ್ರಮ್ ರವಿವಾರ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ರೀಲ್ ವೈರಲ್ ಆದ ನಂತರ ಅವರ ಮಗಳ ಮಾವ ತೊಂದರೆಗೆ ಸಿಲುಕಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇನ್ಸ್ಟಾಗ್ರಾಂ ರೀಲ್ ನಲ್ಲಿ ಅವರು ಕೋತಿಯೊಂದನ್ನು ಮುದ್ದಾಡುತ್ತಾ ಆಟವಾಡುತ್ತಿರುವುದನ್ನು ಕಾಣಬಹುದಾಗಿದೆ. ವಿಕ್ರಮ್ ಮುದ್ದಾಡುತ್ತಿದ್ದ ಕೋತಿ ಅವರ ಮಗಳ ಮಾವ ಸಿಕೆ ರಂಗನಾಥನ್ ಅವರ ಸಾಕು ಪ್ರಾಣಿಯಾಗಿತ್ತು. ಆದರೆ ಇದೀಗ ತಮಿಳುನಾಡಿನ ಅರಣ್ಯ ಇಲಾಖೆ ಈ ಕೋತಿಯನ್ನು ಸಾಕಿರುವ ಉದ್ಯಮಿ ಸಿಕೆ ರಂಗನಾಥನ್ ವಿರುದ್ಧ ತನಿಖೆ ನಡೆಸುತ್ತಿದೆ. ವಿಕ್ರಮ್ ಅವರು ವೀಡಿಯೋವನ್ನು ಡಿಲೀಟ್ ಮಾಡಿದ್ದಾರೆ.

ಲಾರ್ ಗಿಬ್ಬನ್ ಜಾತಿಯ ಕೋತಿ ಬಹಳ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದವಾಗಿದೆ. ಈ ಕೋತಿ ಅಳಿವಿನಂಚಿನಲ್ಲಿರುವ ಪ್ರಭೇದಗಳಾದ ವನ್ಯಜೀವಿ ಮತ್ತು ಸಸ್ಯವರ್ಗದ ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶ (CITES) ಮತ್ತು ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ರಕ್ಷಿಸಲಾಗಿರುವ ಅಳಿವಿನಂಚಿನಲ್ಲಿರುವ ಪ್ರಭೇದವಾಗಿದೆ. ವರದಿಯ ಪ್ರಕಾರ ರಂಗನಾಥನ್ ಜೂನ್ ನಲ್ಲಿ ಮಣಿಪುರದಿಂದ ತಮಿಳುನಾಡಿನ ಈರೋಡ್ ಗೆ ಇದನ್ನು ಅಧಿಕೃತವಾಗಿ ಖರೀದಿಸಿ ತಂದಿದ್ದರು.

ಅಗತ್ಯ ದಾಖಲೆಗಳಿಲ್ಲದೆ ಲಾರ್ ಗಿಬ್ಬನ್ ಅನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಆಗ್ನೇಯ ಏಷ್ಯಾದಿಂದ ಈ ಪ್ರಾಣಿಯನ್ನು ಕಳ್ಳಸಾಗಣೆ ಮಾಡಿರಬಹುದು ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಇಲಾಖೆ ಆ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಆದರೆ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

ವಿಕ್ರಮ್ ವೀಡಿಯೋ ಅಳಿಸಿದ ನಂತೆ ಚೆನ್ನೈ ವನ್ಯಜೀವಿ ವಾರ್ಡನ್ ಯೋಗೇನ್ ಕುಲಾಲ್ ಅವರು ರಂಗನಾಥನ್ ಅವರ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆದರೆ ರಂಗನಾಥನ್ ಅವರ ಬಳಿ ಲಾರ್ ಗಿಬ್ಬನ್ ಸಾಕಲು ಅಗತ್ಯ ದಾಖಲೆಗಳು ಇರಲಿಲ್ಲ ಎಂದು ವರದಿಯಾಗಿದೆ.

ನಟ ವಿಕ್ರಮ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಸಿಕೆ ರಂಗನಾಥನ್ ಅಸವರು CavinKare ನ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ಮಗ ಮನುರಂಜಿತ್ ವಿಕ್ರಮ್ ಅವರ ಮಗಳು ಅಕ್ಷಿತಾರನ್ನು ಮದುವೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News