‘ಜನನಾಯಗನ್’ ಸಿನಿಮಾ ಬಿಡುಗಡೆಗೆ ಮೊದಲೇ ದಾಖಲೆಯ 1 ದಶಲಕ್ಷ ಟಿಕೆಟ್ ಮಾರಾಟ!

Update: 2026-07-23 18:11 IST

ಜನನಾಯಗನ್  | Photo Credit : bookmyshow.com

‘ವಾರಿಸು’ ಮತ್ತು ‘ಗೋಟ್’ ಸಿನಿಮಾದ ನಂತರ ಸತತ ಮೂರನೇ ಬಾರಿ ‘ಜನನಾಯಗನ್’ ಸಿನಿಮಾದ ಟಿಕೆಟುಗಳು ಮೊದಲ ದಿನವೇ 1 ದಶಲಕ್ಷಕ್ಕೂ ಮೀರಿ ಮಾರಾಟವಾಗುವ ಮೂಲಕ ವಿಜಯ್ ದಾಖಲೆ ಸೃಷ್ಟಿಸಿದ್ದಾರೆ.

ಜನನಾಯಗನ್ ಸಿನಿಮಾ ಕೊನೆಗೂ ಚಿತ್ರಮಂದಿರಗಳಿಗೆ ತಲುಪಿದೆ. ವಿಜಯ್ ಅವರ ಸಿನಿವೃತ್ತಿಜೀವನ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಗೂ ಮೊದಲು ಟಿಕೆಟ್ ಪ್ಲಾಟ್ಫಾರ್ಮ್ಗಳಲ್ಲಿ ಈ ಸಿನಿಮಾ 1 ದಶಲಕ್ಷ ಟಿಕೆಟ್ ಮಾರಾಟವನ್ನು ದಾಟಿರುವುದು ಸಿನಿಮಾ ಮೇಲಿನ ಅಸಾಧಾರಣ ನಿರೀಕ್ಷೆಯನ್ನು ಎತ್ತಿ ತೋರಿಸುತ್ತದೆ.

ಮೊದಲ ಪ್ರದರ್ಶನ ಪ್ರಾರಂಭವಾಗುವ ಮೊದಲೇ ಇಷ್ಟೊಂದು ಟಿಕೆಟ್ ಮಾರಾಟವಾಗಿರುವುದು ದೊಡ್ಡ ಸಾಧನೆಯಾಗಿದೆ. ‘ವಾರಿಸು’ ಮತ್ತು ‘ಗೋಟ್’ ಸಿನಿಮಾದ ನಂತರ ಸತತ ಮೂರನೇ ಬಾರಿ ‘ಜನನಾಯಗನ್’ ಸಿನಿಮಾದ ಟಿಕೆಟುಗಳು 1 ದಶಲಕ್ಷಕ್ಕೂ ಮೀರಿ ಮಾರಾಟವಾಗುವ ಮೂಲಕ ವಿಜಯ್ ದಾಖಲೆ ಸೃಷ್ಟಿಸಿದ್ದಾರೆ. ಈ ವಿಶಿಷ್ಟ ದಾಖಲೆಗಾಗಿ ಇದೀಗ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಟ್ರೇಡ್ ಟ್ರ್ಯಾಕರ್ ಸಕ್ನಿಲ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ‘ಜನ ನಾಯಗನ್’ ದೇಶಾದ್ಯಂತ 7.37 ಲಕ್ಷ ಟಿಕೆಟುಗಳನ್ನು ಮಾರಾಟ ಮಾಡಿದೆ. 9,566 ಪ್ರದರ್ಶನಗಳಲ್ಲಿ 16.78 ಕೋಟಿ ರೂ. ಮುಂಗಡ ಬುಕಿಂಗ್ ನಿಂದ ಗಳಿಸಿದೆ.

ಪೈರಸಿ ವಿವಾದ ಮತ್ತು ಬಿಡುಗಡೆ ವಿಳಂಬದ ಹೊರತಾಗಿಯೂ ಅಭಿಮಾನಿಗಳು ವಿಜಯ್ ಅವರನ್ನು ಮತ್ತೆ ತೆರೆ ಮೇಲೆ ಸ್ವಾಗತಿಸಿದ್ದಾರೆ. ಗುರುವಾರ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ ಎಂದು ವರದಿಯಾಗಿದೆ. ಮೊದಲ ದಿನದ ಪ್ರದರ್ಶನದ ಟಿಕೆಟುಗಳು ಕೆಲವೆಡೆ 500 ರೂ.ಯಿಂದ 700 ರೂ.ವರೆಗೆ ಮಾರಾಟವಾಗಿವೆ. ಕೇರಳದಲ್ಲೂ ಬುಕಿಂಗ್ ಚೆನ್ನಾಗಿತ್ತು ಎಂದು ಚಿತ್ರೋದ್ಯಮದ ವಿಶ್ಲೇಷಕ ಶ್ರೀಧರ್ ಪಿಳ್ಳೈ ಹೇಳಿದ್ದಾಗಿ ವರದಿಯಾಗಿದೆ.

‘ಜನನಾಯಗನ್’ ಸಿನಿಮಾ ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಮೊದಲಿನ ವೃತ್ತಿರಂಗಕ್ಕೆ ‘ವಿದಾಯ’ದ ಸಿನಿಮಾ ಎಂದು ಪರಿಗಣಿಸಲಾಗಿತ್ತು. ಎಚ್ ವಿನೋದ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್, ಪ್ರಿಯಾಮಣಿ, ಮಮತಾ ಬೈಜು, ಗೌತಮ್ ಮೆನನ್ ಮತ್ತು ನರೇನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.

ಸಿನಿಮಾಗೆ ಸೆನ್ಸರ್ ಮಂಡಳಿ ‘ಎ’ ಪ್ರಮಾಣಪತ್ರವನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News