×
Ad

ಶೋಲೆ ಚಿತ್ರದ ಖ್ಯಾತ ದೃಶ್ಯ ಬೇರೊಂದು ಚಿತ್ರದ ನಕಲು? ವಿಡಿಯೋ ನೋಡಿ ಆಘಾತ ವ್ಯಕ್ತಪಡಿಸಿದ ಬಾಲಿವುಡ್‌ ಅಭಿಮಾನಿಗಳು

Update: 2023-08-02 13:07 IST

Photo: Twitter/@pbillore141

ರಮೇಶ್ ಸಿಪ್ಪಿಯವರ ಖ್ಯಾತ ಶೋಲೆ (1975) ಚಿತ್ರದ ಒಂದು ದೃಶ್ಯವು ಬೇರೆ ಚಿತ್ರದ ದೃಶ್ಯವನ್ನು ನಕಲಿ ಮಾಡಲಾಗಿದೆ ಎಂಬ ಚರ್ಚೆಯು ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿ ನಡೆಯುತ್ತಿದೆ.

ಶೋಲೆ ಚಿತ್ರದಲ್ಲಿ ಗಬ್ಬರ್ (ಅಮ್ಜದ್ ಖಾನ್) ಠಾಕೂರ್ ನ ಇಡೀ ಕುಟುಂಬವನ್ನು ಕೊಲ್ಲುವ ದೃಶ್ಯವನ್ನು ಸೆರ್ಗಿಯೊ ಲಿಯಾನ್ ಅವರ ವನ್ಸ್ ಅಪಾನ್ ಎ ಟೈಮ್ ಇನ್ ದಿ ವೆಸ್ಟ್ (1968) ಚಿತ್ರದ ದೃಶ್ಯದಿಂದ ಸಂಪೂರ್ಣವಾಗಿ ನಕಲು ಮಾಡಲಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ನಟ ಅದಿಲ್ ಹುಸೈನ್ ಸೋಮವಾರ ಟ್ವಿಟರ್ ನಲ್ಲಿ ಸೆರ್ಗಿಯೊ ಲಿಯಾನ್ ಅವರ ಚಿತ್ರದ ತುಣುಕನ್ನು ಹಂಚಿಕೊಂಡಿದ್ದು, ಇದು ಶೋಲೆ ಚಿತ್ರದ ಸ್ಮರಣೀಯ ಚಿತ್ರಣವನ್ನೇ ಹೋಲುತ್ತದೆ. ಶೋಲೆ ಚಿತ್ರದಲ್ಲಿ ಗಬ್ಬರ್, ಠಾಕೂರ್ ಕುಟುಂಬದ ಒಬ್ಬೊಬ್ಬ ಸದಸ್ಯರನ್ನೂ ಸೆರೆ ಹಿಡಿದಿದ್ದಾರೆ. "ಹ..ಹಾ.. ಹಿಂದೊಮ್ಮೆ ಅತ್ಯಂತ ಜನಪ್ರಿಯ/ ಶ್ಲಾಘನೀಯ ಎನಿಸಿದ್ದ ಭಾರತೀಯ ಚಿತ್ರವನ್ನು ಈ ಕೆಳಗಿನ ಚಿತ್ರದಿಂದ ನಕಲಿಸಿದ್ದು ಎನ್ನುವುದು ಯಾರು ಊಹಿಸಲು ಸಾಧ್ಯ... ಬಹುಶಃ ನಿಮಗೆ ಈಗಾಗಲೇ ತಿಳಿದಿರಬಹುದು?.. ಆದರೆ ತಿಳಿದಿರಲಿಲ್ಲ.. ಎಂದು ಶೀರ್ಷಿಕೆ ನೀಡಿದ್ದಾರೆ.

ಇದಕ್ಕೆ ನಟ ರಣವೀರ್ ಶೋರೆ ಸಂತಸದ ಜಿಫ್‍ನೊಂದಿಗೆ ಪ್ರತಿಕ್ರಿಯಿಸಿದ್ದಾರೆ.

"ಹಾಗಾದರೆ ಇದನ್ನು ಬಾಲಿವುಡ್ ಎಂದು ಏಕೆ ಕರೆಯಬೇಕು" ಎಂದು ರಣವೀರ್ ಪ್ರಶ್ನಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News