×
Ad

ರಜಿನಿಕಾಂತ್‌ ಅವರ ‘ಜೈಲರ್‌’ ನೋಡಲು ಜಪಾನ್‌ನಿಂದ ಚೆನ್ನೈಗೆ ಬಂದ ದಂಪತಿ

Update: 2023-08-10 13:53 IST

Screengrab: Twitter/PTI

ಚೆನ್ನೈ: ರಜಿನಿಕಾಂತ್‌ ಅವರ ಬಹು ನಿರೀಕ್ಷಿತ ಚಿತ್ರ ಜೈಲರ್ ಅನ್ನು ವೀಕ್ಷಿಸಲು ಜಪಾನ್‌ ದಂಪತಿ ಚೆನ್ನೈಗೆ ಬಂದು ತಲುಪಿದೆ. ಗುರುವಾರ ಬಿಡುಗಡೆಯಾದ ಚಿತ್ರವನ್ನು ಇಲ್ಲಿನ ಅಭಿಮಾನಿಗಳೊಂದಿಗೆ ವೀಕ್ಷಿಸಲು ಬಂದಿರುವುದಾಗಿ ರಜಿನಿ ಅಭಿಮಾನಿಗಳಾದ ದಂಪತಿ ತಿಳಿಸಿದೆ.

ಜಪಾನ್‌ನಲ್ಲಿ ರಜನಿಕಾಂತ್ ಅಭಿಮಾನಿಗಳ ಸಂಘದ ನಾಯಕನಾಗಿರುವ ಯಸುದಾ ಹಿಡೆತೋಶಿ ತನ್ನ ಪತ್ನಿಯೊಂದಿಗೆ ಚೆನ್ನೈಗೆ ಬಂದಿದ್ದು, ತಾನು ಸುಮಾರು 20 ವರ್ಷಗಳಿಂದ ಸೂಪರ್‌ಸ್ಟಾರ್ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ರಜನಿಕಾಂತ್ ಚಿತ್ರ ವೀಕ್ಷಿಸಲು ಅವರು ಚೆನ್ನೈಗೆ ಬಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ದರ್ಬಾರ್ ಮತ್ತು ಕಬಾಲಿ ವೀಕ್ಷಿಸಲು ನಗರಕ್ಕೆ ಭೇಟಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News