×
Ad

ಅ.6ರಂದು ಮಾಲಾಶ್ರೀ ಅಭಿನಯದ 'ಮಾರಕಾಸ್ತ್ರ' ಚಲನಚಿತ್ರ ತೆರೆಗೆ

Update: 2023-09-12 11:27 IST

ಮಂಗಳೂರು, ಸೆ.12: ಮಾಲಾಶ್ರೀ ಅಭಿನಯದ 'ಮಾರಕಾಸ್ತ್ರ' ಸಿನೆಮಾ ಅಕ್ಟೋಬರ್ 6ರಂದು ಸಿನೆಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡದ ಪರವಾಗಿ ಡಾ.ವಿ.ನಟರಾಜ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಆರು ಹಾಡುಗಳಿವೆ. ಸಿನೆಮಾದ ಹಿಂದಿ ರೈಟ್ಸ್ 1.8 ಕೋಟಿ ರೂ.ಗೆ ಮಾರಾಟವಾಗಿದ್ದು, ಸ್ಯಾಟ್ ಲೈಟ್ ಹಕ್ಕು 1.25 ಕೋಟಿ ರೂ.ಗೆ ಆಫರ್ ಬಂದಿದೆ” ಎಂದು ಮಾಹಿತಿ ನೀಡಿದರು.

ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಮಾತನಾಡಿ, ಸಿನೆಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವಿದೆ. ಇದು ನನ್ನ 10 ವರ್ಷಗಳ ಕನಸು. ಸಿನಿಮಾ ನೋಡಿ ಆಶೀರ್ವದಿಸಿ ಎಂದರು.

ಮಾರಕಾಸ್ತ್ರ ಚಿತ್ರದಲ್ಲಿ ಮಾಲಾಶ್ರೀ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಲುಕ್ ನಲ್ಲಿ ಕಾಣಿಸಿಕೊಂಡಿದೆ. ನಾಯಕನಾಗಿ ಆನಂದ್ ಆರ್ಯ, ನಾಯಕಿಯಾಗಿ ಹರ್ಷಿಕಾ ಪೂಣಚ್ಚ, ಅಯ್ಯಪ್ಪ ಶರ್ಮಾ, ಮೈಕೋ ನಾಗರಾಜ್, ಉಗ್ರಂ ಮಂಜು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನೃತ್ಯ ನಿರ್ದೇಶಕ ಮತ್ತು ನಿರ್ದೇಶಕರಾಗಿರುವ ಧನುಕುಮಾರ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸ್ವತಃ ಗಾಯಕರಾಗಿರುವ ಡಾ.ನಟರಾಜ ಈ ಚಿತ್ರದಲ್ಲಿ ಹಾಡಿದ್ದಲ್ಲದೆ ನಟನೆ ಕೂಡಾ ಮಾಡಿದ್ದಾರೆ. ಕೋಮಲ ನಟರಾಜ ನಿರ್ಮಾಪಕರಾಗಿದ್ದು ಮಂಜುನಾಥ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗುರುಮೂರ್ತಿ ಸುನಾಮಿ, ನಟ ಆನಂದ್ ಆರ್ಯ, ಕ್ರಿಯೇಟಿವ್ ಹೆಡ್ ಧನಕುಮಾರ್, ಮೈಕೋ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News