ಕೃತಿ ಸನೋನ್  | Photo Credit : X

ಆಭರಣದ ಜಾಹೀರಾತಿನಲ್ಲಿ ಕೃತಿ ಧರಿಸಿದ ಉಡುಗೆ ಮತ್ತು ಜಾಹೀರಾತಿನ ಕಲ್ಪನೆ ಟೀಕೆಗೆ ಗುರಿಯಾಗಿದೆ

ಬಾಲಿವುಡ್ ನಟಿ ಕೃತಿ ಸನೋನ್ ಅವರು ನಟಿಸಿರುವ, ಆಭರಣದ ಬ್ರ್ಯಾಂಡ್ ‘ಜಿವಾ’ ಕಂಪೆನಿಯ ಇತ್ತೀಚಿನ ರಕ್ಷಾ ಬಂಧನದ ಜಾಹೀರಾತಿಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಬ್ಬವನ್ನು ತೋರಿಸಿರುವ ರೀತಿಗೆ ಮತ್ತು ಜಾಹೀರಾತಿನಲ್ಲಿ ಬಳಸಿರುವ ಉಡುಪಿಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ, ಈ ಜಾಹೀರಾತು ಸಂಪ್ರದಾಯ ಮತ್ತು ಆಧುನಿಕತೆಯ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದೆ.

ಆಭರಣದ ಜಾಹೀರಾತಿನಲ್ಲಿ ಕೃತಿ ಧರಿಸಿರುವ ಉಡುಗೆ ಟೀಕೆಗೆ ಗುರಿಯಾಗಿದೆ. ಮಾತ್ರವಲ್ಲದೆ, ಕೃತಿ ತಮ್ಮ ಸಹೋದರನಿಗೆ ರಾಖಿ ಕಟ್ಟಿದ ನಂತರ ನಾಯಿಗೂ ರಾಖಿ ಕಟ್ಟುವ ವಿಚಾರವು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ.

ಈ ವಿಚಾರ ಆನ್ಲೈನ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಯಾವುದೇ ಮಹಿಳೆ ರಾಖಿ ಹಬ್ಬಕ್ಕೆ ಈ ರೀತಿಯ ಉಡುಗೆಯನ್ನು ತೊಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಇನ್ನು ಕೆಲವರು ಉಡುಪಿನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಕೃತಿ ಅವರು ಬಿಳಿ ಬಣ್ಣದ ಬ್ರಾಲೆಟ್ ಶೈಲಿಯ ಬ್ಲೌಸ್, ಕೇಪ್ ಮತ್ತು ಸ್ಕರ್ಟ್ ಧರಿಸಿರುವುದು ಟೀಕೆಗೆ ಒಳಗಾಗಿದೆ. ಸಾಂಪ್ರದಾಯಿಕ ಹಬ್ಬಕ್ಕೆ ಸಮಕಾಲೀನ ತಿರುವು ನೀಡುವ ಗುರಿ ಹೊಂದಿದ್ದರೂ, ಈ ಉಡುಗೆ ಸೂಕ್ತವೇ ಎಂದು ಆನ್ಲೈನ್ ನಲ್ಲಿ ಕೆಲವು ವರ್ಗದವರು ಪ್ರಶ್ನಿಸುತ್ತಿದ್ದಾರೆ. ಆದರೆ, ಇನ್ನೊಂದು ವರ್ಗವು ಇಂತಹ ಉಡುಗೆ ತೊಡುವುದರಿಂದ ಏನು ಸಮಸ್ಯೆಯಿದೆ ಎಂದು ಪ್ರಶ್ನಿಸುತ್ತಿದೆ.

ಈ ನಡುವೆ, ಜಾಹೀರಾತಿನಲ್ಲಿ ನಾಯಿಯೂ ಬರುತ್ತದೆ. ಜಾಹೀರಾತಿನಲ್ಲಿ ಮುಖ್ಯ ಪಾತ್ರದಲ್ಲಿರುವ ಕೃತಿ ತಮ್ಮ ಸಹೋದರನಿಗೆ ರಾಖಿ ಕಟ್ಟಿದ ಸಂದರ್ಭದಲ್ಲಿ ನಾಯಿಯೊಂದು ಅವರ ಬಳಿಗೆ ಬರುತ್ತದೆ. ಅವರು ನಾಯಿಯನ್ನೂ ಕುಟುಂಬದ ಭಾಗವೆಂದು ಪರಿಗಣಿಸಿ ಅದಕ್ಕೂ ರಾಖಿ ಕಟ್ಟುತ್ತಾರೆ. ಹೀಗೆ ನಾಯಿಯೂ ಹಬ್ಬದ ಆಚರಣೆಯಲ್ಲಿ ಸೇರಿಕೊಳ್ಳುತ್ತದೆ.

ಆದರೆ, ಈ ಪರಿಕಲ್ಪನೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ವಿಭಜಿಸಿದೆ. ಕೆಲವರು ಬ್ರ್ಯಾಂಡ್ ತೆಗೆದುಕೊಂಡಿರುವ ಸೃಜನಶೀಲ ಶೈಲಿಯನ್ನು ಪ್ರಶ್ನಿಸುತ್ತಿದ್ದಾರೆ. ನಾಯಿಗೆ ರಾಖಿ ಕಟ್ಟುವುದು ಭಾರತೀಯ ಹಬ್ಬವನ್ನು ಅಣಕಿಸುವಂತಿದೆ ಎಂದು ಆರೋಪಿಸಿದ್ದಾರೆ.

ಈ ಟೀಕೆಗಳಿಗೆ ಸಂಬಂಧಿಸಿ ಕೃತಿ ಸನೋನ್ ಅಥವಾ ಜಿವಾ ಬ್ರ್ಯಾಂಡ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೃತ್ತಿಪರವಾಗಿ, ಕೃತಿ ಸನೋನ್ 2026ರಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ‘ಕಾಕ್ ಟೇಲ್ 2’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ಅವರು ಧನುಷ್ ಜೊತೆಗೆ ‘ತೇರೆ ಇಷ್ಕ್ ಮೇ’ ಸಿನಿಮಾದಲ್ಲಿ ನಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor