ನಟ ಅಕ್ಷಯ್‌ಗೆ ಕಪಾಳಮೋಕ್ಷ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಹಿಂದುತ್ವ ಸಂಘಟನೆ !
ಓ ಮೈ ಗಾಡ್ 2 | PHOTO: Twitter \ @firstpost
ಮುಂಬೈ: ಓ ಮೈ ಗಾಡ್ 2 (OMG 2) ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿರುವ ಹಿಂದುತ್ವವಾದಿ ಸಂಘಟನೆಯೊಂದು ನಟ ಅಕ್ಷಯ್ ಕುಮಾರ್ ಗೆ ಕಪಾಳಮೋಕ್ಷ ಮಾಡಲು ಬಹಿರಂಗ ಕರೆ ನೀಡಿದೆ.
ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಅಕ್ಷಯ್ ಕುಮಾರ್ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಪರಿಷನ್ ಭಾರತ್ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ್ ಆರೋಪಿಸಿದ್ದು, ನಟನ ಕಪಾಳಕ್ಕೆ ಯಾರಾದರೂ ಬಾರಿಸಿದರೆ ರೂ. 10 ಲಕ್ಷ ಬಹುಮಾನವ ನೀಡುವುದಾಗಿ ಘೋಷಿಸಿದ್ದಾರೆ ಎಂದು ThePrint.com ವರದಿ ಮಾಡಿದೆ.
ಸಿನೆಮಾದ ವಿರುದ್ಧ ಹಿಂದುತ್ವವಾದಿ ಸಂಘಟನೆಗಳು ಗುರುವಾರ ಆಗ್ರಾದಲ್ಲಿ ಪ್ರತಿಭಟನೆ ನಡೆಸಿದ್ದು, ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ಮತ್ತು ಚಿತ್ರದ ಪೋಸ್ಟರ್‌ಗಳನ್ನು ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದವು.
ಚಿತ್ರದ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಗೋವಿಂದ್ ಪರಾಶರ್, ಇದು ದೇವರ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ.
OMG 2 ಚಿತ್ರವನ್ನು ನಿಷೇಧಿಸುವಂತೆ ಸೆನ್ಸಾರ್ ಮಂಡಳಿ ಮತ್ತು ಭಾರತದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.