×
Ad

280 ಕೋಟಿ ರೂಪಾಯಿ ದಾಟಿದ 'ಸೈಯಾರಾ' ಗಳಿಕೆ

Update: 2025-08-01 08:30 IST

PC: x.com/yrf

ಮುಂಬೈ: ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಜೋಡಿಯ ಪ್ರೇಮಕಥಾನಕ 'ಸೈಯಾರಾ ಚಿತ್ರ 14ನೇ ದಿನವಾದ ಗುರುವಾ 6.50 ಕೋಟಿ ರೂಪಾಯಿ ಗಳಿಕೆ ದಾಖಲಿಸಿದ್ದು, ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಗಳಿಕೆ 270.50 ಕೋಟಿ ತಲುಪಿದೆ ಎಂದು ಸ್ಕ್ಯಾನ್ಲಿಕ್ ಅಂದಾಜಿಸಿದೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳಿಂದ ತೀವ್ರ ಪೈಪೋಟಿ ಇದ್ದರೂ ಚಿತ್ರ ನಿರಾತಂಕವಾಗಿ ಮುನ್ನಡೆಯುತ್ತಿದೆ.

ಗುರುವಾರದ ಗಳಿಕೆ ಹಿಂದಿನ ದಿನಗಳಿಗೆ ಹೋಲಿಸಿದರೆ ಕಡಿಮೆಯಾದರೂ ಗಮನಾರ್ಹ 6.5 ಕೋಟಿ ತಲುಪಿದೆ. ಆದಾಗ್ಯೂ ಮೋಹಿತ್ ಸೂರಿ ನಿರ್ದೇಶನದ ಚಿತ್ರ ಸ್ಪರ್ಧೆಯಲ್ಲಿ ಇತರ ಚಿತ್ರಗಳಿಗಿಂತ ಮುಂದಿದ್ದು, ಗುರುವಾರ ಒಟ್ಟು ಆಸನ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇಕಡ 11.27 ರಷ್ಟು ಭರ್ತಿಯಾಗಿತ್ತು. ಮಾರ್ನಿಂಗ್ ಶೋ 9.46%, ಮಧ್ಯಾಹ್ನದ ದೇಖಾವೆ  14.11% ಹಾಗೂ ಸಂಜೆ 9.90%, ರಾತ್ರಿ 11.60% ರಷ್ಟು ಭರ್ತಿಯಾಗಿತ್ತು.

ವಿಜಯ್ ದೇವರಕೊಂಡ ಅಭಿಯನದ ಸಾಹಸ ಚಿತ್ರ 'ಕಿಂಗ್ಡಮ್' 15.40 ಕೋಟಿ ರೂಪಾಯಿ ಮೊದಲ ದಿನದ ಸಂಗ್ರಹದೊಂದಿಗೆ ಪೈಪೋಟಿ ನೀಡಿರುವ ಹಿನ್ನೆಲೆಯಲ್ಲಿ ಸೈಯಾರಾ ಚಿತ್ರದ ಗಳಿಕೆ ಇಳಿದಿರಬೇಕು ಎಂದು ಅಂದಾಜಿಸಲಾಗಿದೆ. ಅಜಯ್ ದೇವಗನ್ ಅಭಿನಯದ 'ಸನ್ ಆಫ್ ಸರ್ದಾರ್ 2' ಹಾಗೂ ಬಹುನಿರೀಕ್ಷಿತ ಪ್ರೇಂ ಚಿತ್ರ 'ಧಡಾಕ್-2' ಆಗಸ್ಟ್ 1ರಂದು ಬಿಡುಗಡೆಯಾಗಲಿದ್ದು, ಇದು ಮತ್ತಷ್ಟು ಪೈಪೋಟಿ ನೀಡುವ ಸಾಧ್ಯತೆ ಇದೆ.

ಮೊದಲ ದಿನ 21.5 ಕೋಟಿ ರೂಪಾಯಿ ಸಂಗ್ರಹದೊಂದಿಗೆ ಭರ್ಜರಿ ಆರಂಭ ಕಂಡಿದ್ದ ಸೈಯಾರಾ ಎರಡನೇ ದಿನ 26 ಕೋಟಿ ಹಾಗೂ ಮೂರನೇ ದಿನ 35.75 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಹೀಗೆ ಮೊದಲ ವಾರದಲ್ಲೇ 172.75 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಎರಡನೇ ವಾರದ ಅಂತ್ಯದ ವರೆಗೆ 280.5 ಕೋಟಿ ಆದಾಯ ಗಳಿಸಿದ್ದು, ತೀವ್ರ ಪೈಪೋಟಿಯ ನಡುವೆಯೂ 300 ಕೋಟಿಯ ಗಡಿ ದಾಟುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News