×
Ad

“ಮಗನ ಮೇಲೆ ಕೈ ಮಾಡುವ ಮೊದಲು ತಂದೆಯಲ್ಲೊಮ್ಮೆ ಮಾತನಾಡಬೇಕಿತ್ತು…” : ಟ್ರೆಂಡ್ ಆಯ್ತು ಶಾರುಕ್ ಖಾನ್ ́ಜವಾನ್‌ ʼ ಚಿತ್ರದ ಟ್ರೈಲರ್

ಪಠಾಣ್ʼ ಭರ್ಜರಿ ಯಶಸ್ಸಿನ ನಂತರ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ʼಜವಾನ್ʼ ಚಿತ್ರ ಸಪ್ಟೆಂಬರ್ 7ರಂದು ತೆರೆ ಕಾಣಲಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರದ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ

Update: 2023-08-31 17:59 IST

ಚೆನ್ನೈ : ́ಪಠಾಣ್ʼ ಭರ್ಜರಿ ಯಶಸ್ಸಿನ ನಂತರ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ʼಜವಾನ್ʼ ಚಿತ್ರ ಸಪ್ಟೆಂಬರ್ 7ರಂದು ತೆರೆ ಕಾಣಲಿದೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರದ ಟ್ರೈಲರ್ ಗುರುವಾರ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ – ಶಾರುಖ್ ಜೊತೆಯಾಗಿ ಇದೇ ಮೊದಲ ಬಾರಿ ನಟಿಸಿರುವ ಈ ಚಿತ್ರದ “ಮಗನ ಮೇಲೆ ಕೈ ಮಾಡುವ ಮೊದಲು ತಂದೆಯಲ್ಲೊಮ್ಮೆ ಮಾತನಾಡಬೇಕಿತ್ತು” ಡೈಲಾಗ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ರೆಂಡಿಂಗ್ ಆಗಿದೆ. ಕೇವಲ 5 ಗಂಟೆಗಳಲ್ಲಿ ಚಿತ್ರದ ಟ್ರೈಲರನ್ನು 67 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ನೆಟ್ಟಿಗರು ಈ ಡೈಲಾಗ್ ಗೆ ಫಿದಾ ಆಗಿದ್ದಾರೆ. ಹಲವರು ಈ ಹಿಂದಿನ ಪ್ರಕರಣ ನೆನಪಿಸಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಹಾಗೂ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಗೆ ಟ್ಯಾಗ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಹಾಗೂ ನಯನತಾರಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಮೂಲಕ ಅಟ್ಲೀ ಬಾಲಿವುಡ್ ಪ್ರವೇಶಿಸಿದ್ದಾರೆ . ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿರುವ ಈ ಚಿತ್ರವನ್ನು ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News