ಶಿವರಾಜ್ ಕುಮಾರ್- ಅಭಿಶಾನ್ ಜೀವಿಂತ್ ತಮಿಳು ಸಿನಿಮಾ ಚಿತ್ರೀಕರಣ ಆರಂಭ
Photo Credit : X
ಇನ್ನೂ ಹೆಸರಿಡದ ಗೌತಮ್ ಶಿವರಾಮನ್ ನಿರ್ದೇಶನದ ಸಿನಿಮಾದಲ್ಲಿ ಯೋಗಲಕ್ಷ್ಮೀ ಮತ್ತು ಶಿವಾಣಿ ನಗರಂ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಖ್ಯಾತ ನಟ ಶಿವರಾಜ್ ಕುಮಾರ್ ಮತ್ತು ತಮಿಳಿನ ‘ಟೂರಿಸ್ಟ್ ಫ್ಯಾಮಿಲಿ’ ಖ್ಯಾತಿಯ ನಿರ್ದೇಶಕ ಅಭಿಶಾನ್ ಜೀವಿಂತ್ ತಂದೆ-ಮಗನಾಗಿ ನಟಿಸುತ್ತಿದ್ದಾರೆ. ಇನ್ನೂ ಹೆಸರಿಡದ ಸಿನಿಮಾವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ಸೋಮವಾರ ಚೆನ್ನೈನಲ್ಲಿ ಸಿನಿಮಾದ ಅಧಿಕೃತ ಚಿತ್ರೀಕರಣ ಆರಂಭವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
‘ಲಿಟಲ್ ಹಾರ್ಟ್ಸ್’ ಸಿನಿಮಾದ ಅಭಿನಯದಿಂದ ಖ್ಯಾತರಾದ ಶಿವಾನಿ ನಗರಂ ಸಿನಿಮಾದಲ್ಲಿ ನಾಯಕಿಯಾಗಿ ಜೊತೆಗೂಡಿದ್ದಾರೆ. ‘ಹಾರ್ಟ್ಬೀಟ್’ ಮೂಲಕ ಪ್ರಸಿದ್ಧಿ ಪಡೆದ ನಟಿ ಯೋಗಲಕ್ಷ್ಮಿ ಕೂಡ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ.
ಗೌತಮ್ ಶಿವರಾಮನ್ ಅವರು ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಅಭಿಶಾನ್ ಜೀವಿಂತ್ ಅವರ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಮಧನ್ ನಿರ್ದೇಶನದ ‘ವಿತ್ ಲವ್’ ಚಿತ್ರದ ಮೂಲಕ ನಟನೆಗೂ ಇಳಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಮತ್ತು ‘ಜೈಲರ್ 2’ ತಮಿಳು ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದ ನಂತರ ಇದೀಗ ಈ ಹೊಸ ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಟನಾಗಿ ಕೆಲಸ ಮಾಡುತ್ತಿದ್ದಾರೆ.
ಬಾಲ ಮುರುಗನ್ ಅವರ ಡ್ರಾಮ ಕಂಪನಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಶಿವಾನಿ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯೋಗಲಕ್ಷ್ಮಿ ಅವರಿಗೆ ಇದು ಮೂರನೇ ಸಿನಿಮಾ. ಅವರು ಈಗಾಗಲೇ ಸಿಲಂಬರಸನ್ ಜೊತೆಗೆ ವೆಟ್ರಿ ಮಾರನ್ ಅವರ ‘ಅರಸನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಲಿಯಾನ್ ಜೇಮ್ಸ್ ಸಂಗೀತ, ಪ್ರಗದೀಶ್ ಪ್ರಭು ಛಾಯಾಗ್ರಹಣ ಮತ್ತು ಸಂಕಲನ ಇರಲಿದೆ.
ಈ ನಡುವೆ ಶಿವರಾಜ್ ಕುಮಾರ್ ದಕ್ಷಿಣದ ವಿವಿಧ ಉದ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ರಾಮ್ ಚರಣ್ ಜೊತೆಗೆ ನಟಿಸಿದ ‘ಪೆಡ್ಡಿ’ ಕೂಡ ಸೇರಿದೆ. ‘ಪೆಡ್ಡಿ’ ಜೂನ್ 4ರಂದು ಬಿಡುಗಡೆಯಾಗಲಿದೆ.
ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ‘ಬೈಲ್’ ಸಿನಿಮಾದ ಅಂತಿಮ ಸುತ್ತಿನ ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದೆ.
ಅವರ ಮುಂಬರುವ ಚಿತ್ರಗಳ ಸಾಲಿನಲ್ಲಿ ‘ಡ್ಯಾಡ್’, ‘ಗುಮ್ಮಡಿ ನರಸಯ್ಯ’, ‘ಸರ್ವೈವರ್ - ಎ ಸೂಪರ್‌ಸ್ಟಾರ್ ಡಾಕ್ಯುಮೆಂಟರಿ’ ಮತ್ತು ‘ಎ ಫಾರ್ ಆನಂದ್’ ಸೇರಿವೆ. ಜೊತೆಗೆ ಹೇಮಂತ್ ಎಂ ರಾವ್ ಅವರ ‘666 ಆಪರೇಶನ್ ಡ್ರೀಮ್ ಥಿಯೇಟರ್’ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.