×
Ad

‘ಜವಾನ್‌’ ಚಿತ್ರದ ಭಾಗವಾಗಲಿದ್ದಾರೆಯೇ ಯಶ್‌, ಪೃಥ್ವಿ?; ಟ್ವಿಟರ್‌ನಲ್ಲಿ ಬಿರುಸಿನ ಚರ್ಚೆ

Update: 2023-08-28 21:45 IST

ಹೊಸದಿಲ್ಲಿ: ಕೆಜಿಎಫ್‌ ಸರಣಿ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಸ್ಟಾರ್ ನಟ ಯಶ್‌ ಅವರು ಶಾರುಖ್‌ ಖಾನ್‌ ಅಭಿನಯದ ಬಹು ನಿರೀಕ್ಷಿತ ʼಜವಾನ್‌ʼ ಚಿತ್ರದ ಭಾಗವಾಗಲಿದ್ದಾರೆ ಎಂಬ ಚರ್ಚೆಗಳು ಸಿನಿಪ್ರಿಯರ ನಡುವೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

ತಮಿಳಿನಲ್ಲಿ ನಿರಂತರವಾಗಿ ಹಿಟ್‌ ಚಿತ್ರಗಳನ್ನೇ ನೀಡುತ್ತಾ ಬಂದಿರುವ ಯಶಸ್ವಿ ನಿರ್ದೇಶಕ ಅಟ್ಲೀ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರ ಶಾರುಖ್‌ ವೃತ್ತಿ ಜೀವನದಲ್ಲಿ ಬಹುಮುಖ್ಯ ಚಿತ್ರವಾಗಲಿದೆ ಎನ್ನಲಾಗಿದೆ.

ಹಾಗಾಗಿಯೇ, ಚಿತ್ರ ಹೆಚ್ಚಿನ ಜನರನ್ನು ತಲುಪಲು ಚಿತ್ರತಂಡ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

ಸಿನಮಾಗಳಿಗೆ ರೇಟಿಂಗ್‌ ನೀಡುವ ಐಎಂಡಿಬಿ ಜಾಲತಾಣದಲ್ಲಿ ಚಿತ್ರತಂಡ ನೀಡಿದ ಮಾಹಿತಿಯಲ್ಲಿ ಯಶ್‌, ಮಲಯಾಳಂ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್‌ ಗೆ ವಿಶೇಷ ಧನ್ಯವಾದಗಳನ್ನು ಚಿತ್ರತಂಡ ಅರ್ಪಿಸಿದೆ. ನಾನಾ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ದಿಗ್ಗಜ ಸ್ಟಾರ್‌ಗಳನ್ನೇ ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ.

ಜವಾನ್‌ ಚಿತ್ರದಲ್ಲಿ ಸ್ಟೋರಿ ನರೇಷನ್‌ (ಕಥೆ ಹೇಳುವ) ಹಿನ್ನೆಲೆ ಧ್ವನಿಯಾಗಿ ಯಶ್‌ ಧ್ವನಿ ಇರಲಿದೆ ಎಂದು ಹಲವರು ಅಂದಾಜಿಸಿದ್ದು, ಇನ್ನು ಕೆಲವರು ಬಹುಬಾಷೆಯಲ್ಲಿ ತೆರೆ ಕಾಣುತ್ತಿರುವ ಚಿತ್ರವಾದ ಜವಾನ್‌ನ ಕನ್ನಡ ಅವತರಣಿಕೆಯ ಟ್ರೇಲರ್‌ ಅನ್ನು ಯಶ್‌ ಬಿಡುಗಡೆ ಮಾಡಲಿದ್ದಾರೆ. ಹಾಗಾಗಿ, ಚಿತ್ರತಂಡ ಯಶ್‌ಗೆ ಕೃತಜ್ಞವಾಗಿದೆ ಎಂದು ಊಹಿಸಿದ್ದಾರೆ.

ಆದರೆ, ಜವಾನ್‌ ಚಿತ್ರದಲ್ಲಿ ಯಶ್‌ ಯಾವ ರೀತಿ ಭಾಗಿಯಾಗಲಿದ್ದಾರೆ ಎನ್ನುವುದನ್ನು ಇದುವರೆಗೂ ಚಿತ್ರತಂಡವಾಗಲಿ, ಯಶ್‌ ಆಗಲಿ ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News