×
Ad

ಐಪಿಎಲ್ ಸೀಸನ್ ನ ಆರೆಂಜ್, ಪರ್ಪಲ್ ಕ್ಯಾಪ್ ಸೇರಿ ಪ್ರಶಸ್ತಿಗಳ ಪೂರ್ಣ ಪಟ್ಟಿ...

Update: 2025-06-04 07:56 IST

ಅಹ್ಮದಾಬಾದ್: ಹದಿನೆಂಟು ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿದ್ದು, ಇಡೀ ಟೂರ್ನಿಯಲ್ಲಿ ಬ್ಯಾಟ್ಸ್ಮನ್‌ಗಳು ಹಾಗೂ ಬೌಲರ್‌ಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ ವರ್ಷದ ವಿವಿಧ ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ.

ಫೈನಲ್ ನಲ್ಲಿ ನಾಲ್ಕು ಓವರ್ ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಕಿತ್ತ ಕೃನಾಲ್ ಪಾಂಡ್ಯ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದರು. ಕೇವಲ 10 ಎಸೆತಗಳಲ್ಲಿ 24 ರನ್ ಸಿಡಿಸಿದ ಪಂಜಾಬ್ ನ ಜಿತೇಶ್ ಶರ್ಮಾ ಸೂಪರ್ ಸ್ಟ್ರೈಕರ್ ಪ್ರಶಸ್ತಿಗೆ ಭಾಜನರಾದರು. ಅಜೇಯ 61 ರನ್ ಗಳಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ ಆಕ್ರಮಣಕಾರಿ ಬ್ಯಾಟ್ಸ್ಮನ್ ಶಶಾಂಕ್ ಸಿಂಗ್ ಸೂಪರ್ ಸಿಕ್ಸಸ್ ಪ್ರಶಸ್ತಿ ಪಡೆದರು. ಆನ್ ದ ಗೋ ಫೋರ್ಸ್ ಪ್ರಶಸ್ತಿ ಪಂಜಾಬ್ ನ ಪ್ರಿಯಾಂಶ್ ಆರ್ಯಾ ಪಾಲಾಯಿತು. ಒತ್ತಡದ ಸಂದರ್ಭದಲ್ಲಿ ಹೆಚ್ಚು ಡಾಟ್ ಬಾಲ್ ಗಳನ್ನು ಬೌಲ್ ಮಾಡಿದ ಕೃನಾಲ್ ಪಾಂಡ್ಯ ಗ್ರೀನ್ ಡಾಟ್ ಬಾಲ್ ಪ್ರಶಸ್ತಿ ಗೆದ್ದರು.

ಇಡೀ ಸೀಸನ್ ನಲ್ಲಿ ತೋರಿದ ಪ್ರತಿಭೆಗಳಿಗೆ ನೀಡುವ ಪ್ರಶಸ್ತಿಗಳ ಪೈಕಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಎಡಗೈ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ ಪಾಲಾಯಿತು. ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದ ವೈಭವ ಸೂರ್ಯವಂಶಿ ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿಗೆ ಭಾಜನರಾದರು. ನಿಕೋಲಸ್ ಪೂರನ್ ಸೂಪರ್ ಸಿಕ್ಸಸ್ ಆಫ್ ದಿ ಸೀಸನ್, ಸಾಯಿ ಸುದರ್ಶನ್ ಆನ್ ದ ಗೋ ಫೋರ್ಸ್ ಆಫ್ ದ ಸೀಸನ್, ಮೊಹ್ಮದ್ ಸಿರಾಜ್ ಗ್ರೀನ್ ಡಾಟ್ ಬಾಲ್ ಆಫ್ ದ ಸೀಸನ್, ಕಮಿಂದು ಮೆಂಡಿಸ್ ಕ್ಯಾಚ್ ಆಫ್ ದ ಸೀಸನ್ ಪಡೆದರು.

ಫೇರ್ ಪ್ಲೇ ಅವಾರ್ಡ್ ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾತ್ರವಾಯಿತು. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಗಾಗಿ ಪರ್ಪಲ್ ಕ್ಯಾಪ್ ಗೆದ್ದರೆ, ಹೆಚ್ಚು ರನ್ ಗಳಿಸಿದವರಿಗೆ ನೀಡುವ ಆರೆಂಜ್ ಕ್ಯಾಪ್ ಸಾಯಿ ಸುದರ್ಶನ್ ಪಾಲಾಯಿತು. ಇಡೀ ಸೀಸನ್ ನಲ್ಲಿ ಒತ್ತಡದ ನಡುವೆ ಪಂದ್ಯ ಗೆಲ್ಲಿಸಿದ ಸಾಧನೆಗಾಗಿ ಸೂರ್ಯಕುಮಾರ್ ಯಾದವ್ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಪ್ರಶಸ್ತಿ ಗೆದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News