×
Ad

ಜೋಗಿಬೆಟ್ಟು: ಫೆ.1ರಂದು ರಿಫಾಯಿ ಜುಮಾ ಮಸೀದಿಯಲ್ಲಿ ವಾರ್ಷಿಕ ರಾತೀಬ್

Update: 2024-01-19 19:23 IST

ಉಪ್ಪಿನಂಗಡಿ: ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟುನಲ್ಲಿ 9ನೆ ವಾರ್ಷಿಕ ರಿಫಾಯಿಯ ರಾತೀಬ್‌ ಮಜ್ಲಿಸ್‌ ಫೆ. 1ರಂದು ನಡೆಯಲಿದೆ.

ಅದರ ಪ್ರಯುಕ್ತ ರಿಫಾಯಿಯ ರಾತೀಬ್‌ ಮಜ್ಲಿಸ್‌ ನ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಈ ಸಂದರ್ಭ ಮಸೀದಿಯ ಅಧ್ಯಕ್ಷರಾದ ಯು.ಇ. ಝಕರಿಯಾ ಹಾಜಿ ಅಗ್ನಾಡಿ, ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್‌ ಎಂಜಿ., ಕಾರ್ಯದರ್ಶಿಯರಾದ ಅಬ್ದುಲ್‌ ಕರೀಂ ಹಾಜಿ, ಸಮೀರ್‌ ಜಿ.ಕೆ., ಹಮೀದ್‌ ಮುಸ್ಲಿಯಾರ್‌, ಮುಹಮ್ಮದ್ ಇಕ್ಬಾಲ್‌ ಉಪನ್ಯಾಸಕ, ಅಲಿ ಜೋಗಿಬೆಟ್ಟು ಮತ್ತು ಆಡಳಿತ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

 








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News