ಕಾಪು ಕಾಂಗ್ರೆಸ್ ಅಲ್ಪಸಖ್ಯಾತ ಘಟಕ ಕಾರ್ಯಾಧ್ಯಕ್ಷರಾಗಿ ರಿಯಾಝ್ ನಝೀರ್ ಸಾಹೇಬ್ ಆಯ್ಕೆ
ರಿಯಾಝ್ ನಝೀರ್ ಸಾಹೇಬ್
ಪಡುಬಿದ್ರಿ: ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷರಾಗಿ ರಿಯಾಝ್ ನಝೀರ್ ಸಾಹೇಬ್ ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯಕುಮಾರ್ ಸೊರಕೆ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೈ. ಸುಕುಮಾರ್ ಅವರ ಶಿಫಾರಸಿನ ಮೇರೆಗೆ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಸಾಹೇಬ್ ಆದೇಶದಂತೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದಿನ್ ಶೇಖ್ ನೇಮಕ ಮಾಡಿದ್ದಾರೆ.
ದಾರುಲ್ ಅಮಾನ್ ಎಜುಕೇಶನ್ ಸೆಂಟರ್‍ನ ಪ್ರಧಾನ ಕಾರ್ಯದರ್ಶಿಯಾಗಿ, ಮುಸ್ಲಿಮ್ ಒಕ್ಕೂಟದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ಅಲ್‍ಜಾಮಿಯ ಮಯಂಗ್‍ಮೆನ್ಸ್‌ನಲ್ಲಿ ಅಧ್ಯಕ್ಷರಾಗಿ, ಸುನ್ನೀ ಜಾಮಿಯಾ ಸೀದಿಯಲ್ಲಿ ಉಪಾಧ್ಯರಾಗಿ, ಲಯನ್ಸ್ ಕ್ಲಬ್ ಮುದರಂಗಡಿ ಅಧ್ಯಕ್ಷರಾಗಿ, ಪಡುಬಿದ್ರಿ ರೋಟರಿ ಕ್ಲಬ್‍ನ ಪೂರ್ವಾಧ್ಯಕ್ಷರಾಗಿ, ಅಸೋಸಿಯೇಶನ್ ಫಾರ್ ಪ್ರೊಟೆಕ್ಸನ್ ಅಫ್ ಸಿವಿಲ್ ರೈಟ್ಸ್ ಜಿಲ್ಲಾ ಸದಸ್ಯರಾಗಿ, ಯುನೈಟೆಡ್ ಎಮಪವರ್‍ಮೆಂಟ್ ಅಸೋಸಿಯೇಶನ್‍ಮನ ರಾಜ್ಯ ಸದಸ್ಯರಾಗಿ ವಿವಿಧ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.