×
Ad

ತೇಲುವ ಸಿಎನ್ ಜಿ ಸ್ಟೇಷನ್ : ಗಂಗಾನದಿಯಲ್ಲಿ ದೋಣಿಗಳಿಂದಾಗುವ ಮಾಲಿನ್ಯಕ್ಕೆ ಕಡಿವಾಣ

Update: 2026-03-05 23:12 IST

ವಾರಣಾಸಿ: ವಾರಣಾಸಿಯ ನಮೋ ಘಾಟ್ ಮತ್ತು‌ ರವಿದಾಸ್ ಘಾಟ್ ನಲ್ಲಿ ಗಂಗಾನದಿಯ ಕಿನಾರೆಯಲ್ಲಿ ಸ್ಥಾಪನೆಗೊಂಡಿರುವ ನೈಸರ್ಗಿಕ ಅನಿಲ್ (ಸಿಎನ್ ಜಿ) ಸ್ಥಾವರಗಳ ಸ್ಥಾಪನೆಯಿಂದಾಗಿ ದೋಣಿಗಳಿಗೆ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಇಂಧನ ದೊರೆಯುವಂತಾಯಿತು.

ತೇಲುವ ಸಿಎನ್ ಸ್ಟೇಷನ್ ಸ್ಥಾಪನೆಯಿಂದಾಗಿ ಗಂಗಾ ನದಿಯಲ್ಲಿ ಡಿಸೇಲ್ ಇಂಜಿನ್ ದೋಣಿಗಳಿಂದಾಗಿ ಉಂಟಾಗು ತ್ತಿದ್ದ ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ವನ್ನು ಕಡಿಮೆಯಾಗಿದೆ.

ಗೇಲ್ ಇಂಡಿಯಾ ಲಿಮಿಟೆಡ್ ನ ತೇಲುವ ಸಿಎನ್ ಜಿ ಸ್ಟೇಷನ್ ರವಿದಾಸ್ ಘಾಟ್ ನಲ್ಲಿ 2023 ,ನ.23ರಂದು ಆರಂಭಗೊಂಡಿತ್ತು. ನಮೋಘಾಟ್ ನಲ್ಲಿ ಡಿ.2021 ರಲ್ಲಿ ಸಿಎನ್ ಜಿ ಸ್ಟೇಷನ್ ಸ್ಥಾಪನೆಯಾಗಿದ್ದು, ಇದು ದೇಶದ ಮೊದಲ ತೇಲುವ ಸಿಎನ್ ಜಿ ಸ್ಟೇಷನ್ ಆಗಿದೆ. ಹಳೆಯ ಡಿಸೇಲ್ ಇಂಜಿನ್ ಗಳ ಬದಲಿಗೆ ಸಿಎನ್ ಜಿ ಕಿಟ್ ಅಳವಡಿಸುವುದರಿಂದದೋಣಿಯವರು ಶೇ 35ರಿಂದ 40ರಷ್ಟು ಅಧಿಕ ಮೈಲೇಜ್ ಪಡೆಯುತ್ತಿದ್ದಾರೆ. ಡಿಸೇಲ್ ದೋಣಿಗಳಿಂದಾಗಿ ಗಂಗಾನದಿಯಲ್ಲಿ ಆಗುತ್ತಿದ್ದ ಮಾಲಿನ್ಯ ಕಡಿಮೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ವಾರಣಾಸಿಯ ತೇಲುವ ಸಿಎನ್ ಜಿ ಸ್ಟೇಷನ್ ಗಳನ್ನು ಸುಮಾರು 17.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿರುವ ಕರ್ನಾಟಕದ ಪತ್ರಕರ್ತರು ವಾರಣಾಸಿಯ ತೆಲುವ ಸಿಎನ್ ಜಿ‌ ಸ್ಟೇಷನ್ ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಪ್ರವಾಸ ಆಯೋಜಿಸಿರುವ ಪಿಐಬಿ‌ ಅಧಿಕಾರಿಗಳು ಪತ್ರಕರ್ತರಿಗೆ ಸಹಕಾರ ನೀಡಿದರು.

ವಾರಣಾಸಿ ನಗರ ನಿಗಮದಲ್ಲಿ ನೋಂದಾಯಿತವಾಗಿರುವ ಬಹುತೇಕ ದೋಣಿಗಳನ್ನು ಗೇಲ್ ನ ಸಿಎಸ್ ಆರ್ ಯೋಜನೆಯಡಿ ಸಿಎನ್ ಜಿಗೆ ಪರಿವರ್ತಿಸಲಾಗಿದೆ.

ನಮೋಘಾಟ್ ನ ಸ್ಟೇಷನ್ ನಿಂದ ದಿನಕ್ಕೆ 1000- 1500 ದೋಣಿಗಳಿಗೆ ಮತ್ತು ರವಿದಾಸ್ ಘಾಟ್ ನ ಸ್ಟೇಷನ್ 300-400 ದೋಣಿಗಳಿಗೆ ಇಂಧನ‌ ಪೂರೈಕೆ ಸಾಮಥ್ರ್ಯ ಹೊಂದಿವೆ. ನಮೋಘಾಟ್ ನಿಂದ ನೈಸರ್ಗಿಕ ಇಂಧನವನ್ನು ಜಲ ಮಾರ್ಗದ ಮೂಲಕ ರವಿದಾಸ್ ಘಾಟ್ ಸ್ಟೇಷನ್ ಗೆ ಸಾಗಿಸಲಾಗುತ್ತದೆ. ಈ ಎರಡು ನಿಲ್ದಾಣ ಗಳ ನಿರ್ಮಾಣದ ಯಶಸ್ಸು ದೇಶದ ಇತರ ಭಾಗಗಳಲ್ಲಿ ಇಂತಹ ಸ್ಟೇಷನ್ ನಿರ್ಮಾಣ ಹಾದಿಯಲ್ಲಿ ಚಿಂತನೆ ಮಾಡಿಕೊಟ್ಟಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - -ಇಬ್ರಾಹಿಂ ಅಡ್ಕಸ್ಥಳ

contributor

Similar News