×
Ad

ಅ.8ರಂದು ಕೆಸಿಎಫ್ ದುಬೈ ಸೌತ್ ಝೋನ್‌ನಿಂದ ಮೀಲಾದ್ ಕಾನ್ಫರೆನ್ಸ್; ಸ್ವಾಗತ ಸಮಿತಿ ಅಸ್ತಿತ್ವಕ್ಕೆ

Update: 2023-08-09 22:29 IST

ಇಕ್ಬಾಲ್ ಸಿದ್ದಕಟ್ಟೆ

ದುಬೈ, ಆ.9: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ಸೌತ್ ಝೋನ್ ವತಿಯಿಂದ ಅಕ್ಟೋಬರ್ 8ರಂದು ನಡೆಯುವ ಬೃಹತ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ಬೇ ಬೈಟ್ಸ್ ಹೊಟೇಲ್‌ನಲ್ಲಿ ನಡೆಯಿತು.

ಕೆಸಿಎಫ್ ಯುಎಇ ನಾಲೆಡ್ಜ್ ವಿಭಾಗದ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಶೀದ್ ಹನೀಫಿ ಉದ್ಘಾಟಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಇಬ್ರಾಹೀಂ ಸಖಾಫಿ ಕೆದುಂಬಾಡಿ ಮುಖ್ಯ ಪ್ರಭಾಷಣಗೈದರು.

ಬಳಿಕ ನೂತನ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್‌ಮ್ಯಾನ್ ಇಕ್ಬಾಲ್ ಸಿದ್ದಕಟ್ಟೆ, ವರ್ಕಿಂಗ್ ಚೇರ್‌ಮ್ಯಾನ್ ನಝೀರ್ ಹಾಜಿ ಕೆಮ್ಮಾರ, ಕನ್ವೀನರ್ ಅಶ್ಫಾಕ್ ಕೊಡಗು, ವರ್ಕಿಂಗ್ ಕನ್ವೀನರ್ ಆಸಿಫ್ ಇಂದ್ರಾಜೆ, ಕೋಶಾಧಿಕಾರಿ ಅಬ್ದುಲ್ ಜಲೀಲ್ ಕಾಸರಗೋಡು, ಫಿನಾಂಶಿಯಲ್ ಚೇರ್ ಮ್ಯಾನ್ ಇಬ್ರಾಹೀಂ ಹೆಜಮಾಡಿ, ಮೀಡಿಯಾ ಚೇರ್‌ಮ್ಯಾನ್ ಮುಸ್ತಫಾ ಸಖಾಫಿ, ಪಬ್ಲಿಕೇಶನ್ ಚೇರ್‌ಮ್ಯಾನ್ ರಶೀದ್ ಹನೀಫಿ ಸೇರಿದಂತೆ ವಿವಿಧ ವಿಭಾಗಗಳಿಗೆ ಕಾರ್ಯಕರ್ತರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭ ಕೆಸಿಎಫ್ ಅಂತರ್‌ರಾಷ್ಟ್ರೀಯ ಪ್ರತಿಭೋತ್ಸವ ಖಿರಾಅತ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಆಶಿಕ್ ರನ್ನು ಸನ್ಮಾನಿಸಲಾಯಿತು. ಅಝೀಝ್ ಕೆದಿಲರ ಸ್ವಾಗತಿಸಿದರು. ಆಸಿಫ್ ಇಂದ್ರಾಜೆ ವಂದಿಸಿದರು. ದುಬೈ ಸೌತ್ ಝೋನ್ ಕಾರ್ಯದರ್ಶಿ ಮನ್ಸೂರ್ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News