ಮಂಗಳೂರು: ಮಹಾ ಮಳೆಗೆ 68 ಆಡು, ಕುರಿಗಳ ಸಾವು
Update: 2025-05-30 21:18 IST
ಉಳ್ಳಾಲ : ನಿನ್ನೆ ರಾತ್ರಿ ಸುರಿದ ಮಹಾಮಳೆಯಿಂದ ತಲಪಾಡಿ ಸಮೀಪದ ಕೆಸಿ ರೋಡ್ ಮಟನ್ ಯಾಕೂಬ್ ರವರ 68 ಆಡು, ಕುರಿಗಳು ಸಾವಿಗೀಡಾಗಿದೆ. ಆಡಿನ ಶೆಡ್ಡಿನೊಳಗೆ ನಿರಂತರ ಸುರಿದ ಮಳೆಯಿಂದ ನೆರೆ ನೀರು ನುಗ್ಗಿದ್ದು, ಆಡು, ಕುರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ. 23 ಆಡು, ಕುರಿಗಳು ಪತ್ತೆಯಾಗಿದ್ದು, ಹೊಂಡ ತೆಗೆದು ಹೂಳಲಾಗಿದೆ.